ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ

ಕರ್ನಾಟಕ: ನವೆಂಬರ್ 1ರಿಂದ ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯಗಳ ಪ್ರವೇಶ ಶುಲ್ಕ ಹೆಚ್ಚಳ

ನವೆಂಬರ್ 1ರಿಂದ ರಾಜ್ಯದ ರಾಷ್ಟ್ರೀಯ ಉದ್ಯಾನವನಗಳು, ಹುಲಿ ಮೀಸಲು ಕೇಂದ್ರಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಪ್ರವೇಶ ...
ಬೆಂಗಳೂರು: ನವೆಂಬರ್ 1ರಿಂದ ರಾಜ್ಯದ ರಾಷ್ಟ್ರೀಯ ಉದ್ಯಾನವನಗಳು, ಹುಲಿ ಮೀಸಲು ಕೇಂದ್ರಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಪ್ರವೇಶ ಶುಲ್ಕ ಹೆಚ್ಚಾಗಲಿದೆ. ಪ್ರವಾಸಿಗರ ಪ್ರವೇಶ  ಶುಲ್ಕ ದರವನ್ನು ಅರಣ್ಯ ಇಲಾಖೆ ಹೆಚ್ಚಿಸಿದ್ದು ಇದು ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಇನ್ನು ಮುಂದೆ ಹುಲಿ ಮೀಸಲು ಕೇಂದ್ರಗಳಿಗೆ ಪ್ರತಿ ವ್ಯಕ್ತಿಗೆ ಪ್ರವೇಶ ಶುಲ್ಕ 250 ರೂಪಾಯಿಗಳಿದ್ದರೆ, ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯ ಮೃಗ ಅಭಯಾರಣ್ಯಗಳಿಗೆ ಪ್ರತಿ ವ್ಯಕ್ತಿಗೆ ಪ್ರವೇಶ ಶುಲ್ಕ 150 ರೂಪಾಯಿ ನಿಗದಿಪಡಿಸಲಾಗಿದೆ.
ವನ್ಯಮೃಗ ಅಭಯಾರಣ್ಯಗಳ ಅಧಿಕಾರಿಗಲು ಮನವಿ ಮಾಡಿಕೊಂಡಿದ್ದರೂ ಕೂಡ ಕಳೆದ ಎರಡು ವರ್ಷಗಳಿಂದ ಪ್ರವೇಶ ದರದಲ್ಲಿ ಪರಿಷ್ಕರಣೆ ಮಾಡಿರಲಿಲ್ಲ. ಹಲವು ವನ್ಯಮೃಗಗಳ ಅಭಯಾರಣ್ಯ ಮತ್ತು ಉದ್ಯಾನವನಗಳ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರಿಂದ ಪ್ರವೇಶ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. ಬಂಡೀಪುರ, ಕಾಳಿ, ಭದ್ರಾ ಮತ್ತು ಬಿಆರ್ ಟಿ ಮೀಸಲು ಅರಣ್ಯ, ವೀರನಹೊಶಳ್ಳಿ, ನನಚಿ ಮತ್ತು ಅಂತರ್ ಸಂತೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ ಪ್ರವೇಶ ಶುಲ್ಕವನ್ನು 200ರಿಂದ 250 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 
ಕುದುರೆಮುಖ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಗಳಾದ ಭೀಮಗಢ, ಬ್ರಹ್ಮಗಿರಿ, ಪುಷ್ಪಗಿರಿ, ಸೋಮೇಶ್ವರ, ತಲಕಾವೇರಿ ಅಭಯಾರಣ್ಯಗಳಿಗೆ ಪ್ರವೇಶ ದರ 150 ರೂಪಾಯಿ. ಸಣ್ಣ ಅಭಯಾರಣ್ಯಗಳಾದ ನುಗು, ಕೊಡಚಾದ್ರಿ, ರಾಣೆಬೆನ್ನೂರು, ರಂಗಯಣ್ಣದುರ್ಗ ಮತ್ತು ರಾಮದೇವರಬೆಟ್ಟಗಳಿಗೆ ಈಗಲೂ ಪ್ರವೇಶ ಶುಲ್ಕ 25ರೂಪಾಯಿ. ರಂಗನತಿಟ್ಟು ಪಕ್ಷಿ ಅಭಯಾರಣ್ಯಕ್ಕೆ ಪ್ರವೇಶ ಶುಲ್ಕ 70 ರೂಪಾಯಿ, ದೋಣಿ ವಿಹಾರಕ್ಕೆ 70 ರೂಪಾಯಿ ಮತ್ತು ಚಾರ್ಟರ್ಡ್ ದೋಣಿಗಳಿಗೆ ಪ್ರತಿ ವ್ಯಕ್ತಿಗೆ 1,500 ರೂಪಾಯಿಗಳಾಗಿವೆ.
ಸಫಾರಿ ಮತ್ತು ಗೈಡ್ ದರ ಕೂಡ ಹೆಚ್ಚಿಸಲಾಗಿದೆ. ಇಲಾಖೆ ಬಸ್ಸುಗಳಲ್ಲಿ ಸಫಾರಿ ಶುಲ್ಕ ಪ್ರತಿ ವ್ಯಕ್ತಿಗೆ 300 ರೂಪಾಯಿಗಳಾಗಿದ್ದು ಇಲಾಖೆಯ ಜೀಪ್ ಗಳಲ್ಲಿ ಸಫಾರಿ ಸಂಚಾರಕ್ಕೆ 200 ರೂಪಾಯಿಗಳಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com