ಗೌರಿ ಹಂತಕರ ಸ್ಕೆಚ್ ನ ತಿಲಕ ತಂದಿತ್ತ ಫಜೀತಿ: ಶಾಸಕ ಸುರೇಶ್ ಗೌಡ ಆಪ್ತನಿಗೆ ಸಂಕಷ್ಟ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ ಐಟಿ) ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ, ...
ಎಸ್ ಐಟಿ ಬಿಡುಗಡೆ ಮಾಡಿರುವ ರೇಕಾಚಿತ್ರ ಮತ್ತು ಪ್ರಭಾಕರ್
ಎಸ್ ಐಟಿ ಬಿಡುಗಡೆ ಮಾಡಿರುವ ರೇಕಾಚಿತ್ರ ಮತ್ತು ಪ್ರಭಾಕರ್
Updated on: 
ಬೆಂಗಳೂರು:  ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ ಐಟಿ) ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ, ಮತ್ತೊಂದೆಡೆ ಬಿಡುಗಡೆ ಮಾಡಿದ ಒಂದು ರೇಖಾಚಿತ್ರ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ ಫಜೀತಿಗೆ ಸಿಲುಕುವಂತೆ ಮಾಡಿದೆ.
ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡರ ಆಪ್ತ ಸಹಾಯಕ ಪ್ರಭಾಕರ್ ರೇಖಾಚಿತ್ರದಲ್ಲಿರುವ ತಿಲಕವಿಟ್ಟ ವ್ಯಕ್ತಿಯ ಹಾಗೇಯೆ ಕಾಣುತ್ತಾರೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಅವರು ರೇಖಾಚಿತ್ರಕ್ಕೂ, ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ ಪ್ರಭಾಕರ್ ಅವರು ಹಣೆ ಮೇಲೆ ತಿಲಕ ಇಟ್ಟುಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ರೇಖಾಚಿತ್ರಕ್ಕೂ ಪ್ರಭಾಕರ್ ಗೂ ಹೋಲಿಕೆ ಇದೆ ಎಂದು ಹೇಳಿ ಹಲವಾರು ಮಂದಿ ದೂರವಾಣಿ ಕರೆ ಮಾಡಿ ತೊಂದರೆ ಕೊಡುತ್ತಿರುವುದಾಗಿ ಅಲವತ್ತುಕೊಂಡಿದ್ದಾರೆ.
ಕೊನೆಗೂ ಬೇಸತ್ತ ಪ್ರಭಾಕರ್ ಅವರು ತಮ್ಮ ಫೇಸ್ ಬುಕ್ ನಲ್ಲಿ, ನನಗೂ ಗೌರಿ ಹತ್ಯೆಗೂ, ಹಂತಕರ ರೇಖಾಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಕಳೆದ 18 ವರ್ಷಗಳಿಂದ ಹಣೆಗೆ ತಿಲಕ ಇಟ್ಟುಕೊಳ್ಳುತ್ತಿದ್ದೇನೆ ಎಂದು  ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com