ಬೆಂಗಳೂರು: ಅಕ್ರಮ ಕಸಾಯಿಖಾನೆ ಪರಿಶೀಲಿಸುತ್ತಿದ್ದ ಕೋರ್ಟ್ ಆಯುಕ್ತರ ಮೇಲೆ ದಾಳಿ, 13 ಮಂದಿ ಬಂಧನ

ಅಕ್ರಮ ಕಸಾಯಿಖಾನೆಯನ್ನು ತಪಾಸಣೆ ಮಾಡಲು ಹೈಕೋರ್ಟ್ ನೇಮಿಸಿದ ಕೋರ್ಟ್ ಆಯುಕ್ತರ ಮೇಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಕ್ರಮ ಕಸಾಯಿಖಾನೆಯನ್ನು ತಪಾಸಣೆ ಮಾಡಲು ಹೈಕೋರ್ಟ್ ನೇಮಿಸಿದ್ದ ಕೋರ್ಟ್ ಆಯುಕ್ತರು ತಪಾಸಣೆ ಮಾಡುತ್ತಿದ್ದ ವೇಳೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಕನಿಷ್ಠ 13 ಮಂದಿಯನ್ನು ಬಂಧಿಸಲಾಗಿದೆ. 
ಯಲಹಂಕ ನ್ಯೂ ಟೌನ್ ಹತ್ತಿರ ದೊಡ್ಡ ಬೆಟ್ಟಹಳ್ಳಿ ಸಮೀಪ ಕೋರ್ಟ್ ಆಯುಕ್ತರ ಕಾರಿನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮೊನ್ನೆ ಮಂಗಳವಾರ ಹಲ್ಲೆ ನಡೆಸಿದರು.
ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೇಸನ್ನು ದಾಖಲಿಸಲಾಗಿದೆ. ಅದರಲ್ಲಿ ಒಂದು ಅಕ್ರಮ ಕಸಾಯಿಖಾನೆ ಕಾಯ್ದೆಯಡಿ ಮತ್ತು ಇನ್ನೊಂದು ಗುಂಪಿನ ಮೇಲೆ ನಡೆದ ದಾಳಿ ಬಗ್ಗೆ ಕೇಸು ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ತಲ್ಕಟ್ ಪುರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕಸಾಯಿಖಾನೆ ಉದ್ದೇಶಕ್ಕೆ ಹಸುಗಳನ್ನು ಕಟ್ಟಿ ಹಾಕಲಾಗಿದೆ ಎಂದು ಕೋರ್ಟ್ ಆಯುಕ್ತರಿಗೆ ಪೊಲೀಸರು ತಿಳಿಸಿದ್ದರು. ನ್ಯಾಯಾಲಯದ ಆಯುಕ್ತರ ವಾಹನದ ಮೇಲೆ ಕೂಡ ದಾಳಿ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com