ವನ್ಯಜೀವಿ ಕಾರ್ಯಕರ್ತ ಜಿ ವೀರೇಶ್ ಅವರು ಮಾತನಾಡಿ "80 ಕ್ಕಿಂತಲೂ ಹೆಚ್ಚಿನ ಜನರಿದ್ದ ಹೋಂ ಸ್ಟೇ ಗಳನ್ನು ನಾವು ನೋಡಿದ್ದೇವೆ. ಎರಡು ಹೋಂಸ್ಟೇ ಗಳಲ್ಲಿ 100 ಜನರಿದ್ದರು! 41 ಕ್ಕೂ ಹೆಚ್ಚು ಹೋಂ ಸ್ಟೇ ಗಳು ಬೃಹತ್ ಕಟ್ಟಡಗಳು, ಕುಟೀರಗಳು ಮತ್ತು ಕೊಠಡಿಗಳಂತಹ ಸೌಕರ್ಯವನ್ನು ಹೊಂದಿವೆ.ಅನೇಕ ಹೋಂ ಸ್ಟೇ ಗಳಉ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿವೆ. ಉದಾಹರಣೆಗೆ ಅರಣ್ಯನಾಶ ಚಟುವಟಿಕೆಗಳು, ಬೇಟೆ, ವನ್ಯಜೀವಿ ಮಾಂಸ ವ್ಯಾಪಾರ, ಮೀನುಗಾರಿಕೆ ಮತ್ತು ನಿಷೇಧಿತ ಮಾರ್ಗಗಳಲ್ಲಿ ಟ್ರೆಕ್ಕಿಂಗ್. "