ಬರದಿಂದ ಕಂಗೆಟ್ಟಿದ್ದ ರಾಜ್ಯದ ರೈತನಿಗೆ ಮತ್ತೊಂದು ಬರೆ: ಹೆಚ್ಚಿನ ಮಳೆಯಿಂದಾಗಿ ಬೆಳೆ ಹಾನಿ

2015 ರಿಂದ ಸತತ ಬರಗಾಲಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ಈ ಬಾರಿಯ ಮಳೆ ರೈತನ ಮೊಗದಲ್ಲಿ ಕೊಂಚ ಹರ್ಷ ಮೂಡಿಸಿತ್ತು, ಆದರೆ ಅದು ಕೂಡ ಹೆಚ್ಚು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 2015 ರಿಂದ ಸತತ ಬರಗಾಲಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ಈ ಬಾರಿಯ ಮಳೆ ರೈತನ ಮೊಗದಲ್ಲಿ ಕೊಂಚ ಹರ್ಷ ಮೂಡಿಸಿತ್ತು, ಆದರೆ ಅದು ಕೂಡ ಹೆಚ್ಚು ಸಮಯ ನಿಂತಿಲ್ಲ, ಏಕೆಂದರೇ ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮತ್ತೊಮ್ಮೆ ನಷ್ಟ ಅನುಭವಿಸುವಂತಾಗಿದೆ.
ಭಾರೀ ಮಳೆಯಿಂದಾಗಿ  ಬೆಳೆ ಕೊಯ್ಲು ವೇಳೆ ಹಾನಿ ಉಂಟಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅಕ್ಟೋಬರ್ ತಿಂಗಳಾಂತ್ಯ ತೇವಾಂಶ ಮುಂದುವರೆದರೇ ಸುಗ್ಗಿ ಕಾಲದಲ್ಲಿ ಉಂಟಾಗುವ ರೋಗಗಳು ರೈತರ ಆದಾಯಕ್ಕೆ ಕತ್ತರಿ ಹಾಕು ಸಾಧ್ಯತೆಯಿದೆ ಎಂದು ಕೃಷಿ ವಿಶ್ವ ವಿದ್ಯಾನಿಲಯದ ಸಸ್ಯ ರೋಗಶಾಸ್ತ್ರಜ್ಞ ಡಾ.ಎನ್ ನಾಗರಾಜ್ ಹೇಳಿದ್ದಾರೆ.
200 ಕೆಜಿ ಬೆಳೆ ನೀಡುವ ಭೂಮಿಯಲ್ಲಿ ಈ ಬಾರಿ ಕೇವಲ 140 ಕೆಜಿ ಮಾತ್ರ ಬೆಳೆಯಬಹುದು, ಟಮೊಟೋ ನಂತರ ಕೊಳೆತು ಹೋಗಬಹುದಾದ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಲಿದೆ. ಮಳೆಯ ಪ್ರಭಾವದಿಂದ ಪಪ್ಪಾಯ, ಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳಿಗೂ ಹೆಚ್ಚಿನ ಹಾನಿಯಾಗಲಿದೆ ಎಂದು ತಿಳಿಸಿದ್ದಾರೆ.
ಮೆಕ್ಕೆ ಜೋಳ, ಹೆಸರುಕಾಳು,  ಜೋಳ, ಮತ್ತು ರಾಗಿ ಬೆಳೆಗಳಿಗೂ ಇದರಿಂದ ವಿನಾಯಿತಿಯಿಲ್ಲ, ಆದರೆ ಭತ್ತದಂತ ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟಾಗುವುದಿಲ್ಲ ಎಂದು ವಿವರಿಸಿದ್ದಾರೆ. 
ಮಳೆಯಿಂದಾಗಿ ರಾಗಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ.  ಬೆಳೆಯ ತಳದಲ್ಲಿ ನೀರು ನಿಲ್ಲುವುದರಿಂದ ಕೊಯ್ಲಿಗೆ ಮುನ್ನವೇ ಮೊಳಕೆ ಬರುವ ಸಾಧ್ಯತೆಯಿರುತ್ತದೆ, ಇದರಿಂದ ರಾಗಿ ಬೆಳೆದ ರೈತನಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿ ಶಿವಕುಮಾರ್ ಹೇಳಿದ್ದಾರೆ. ಎಂರಡು ವರ್ಷಗಳ ಬರದ ನಂತರ ರಾಜ್ಯದಲ್ಲಿ ಮಳೆಯಿಂದಾಗಿ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com