ಮೊಳಕಾಲ್ಮೂರು: 10 ವರ್ಷದ ಬಾಲಕ ಅಪಹರಣ, 6 ಜನರ ಬಂಧನ

10 ವರ್ಷದ ಬಾಲಕನನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಮೊಳಕಾಲ್ಮೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೊಳಕಾಲ್ಮೂರು: 10 ವರ್ಷದ ಬಾಲಕ ಅಪಹರಣ, 6 ಜನರ ಬಂಧನ
ಮೊಳಕಾಲ್ಮೂರು: 10 ವರ್ಷದ ಬಾಲಕ ಅಪಹರಣ, 6 ಜನರ ಬಂಧನ
Updated on: 
ಮೊಳಕಾಲ್ಮೂರು: 10 ವರ್ಷದ ಬಾಲಕನನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಮೊಳಕಾಲ್ಮೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ಮೊಳಕಾಲ್ಮೂರು ತಾಲೂಕು ಬಿಜಿ ಕೆರೆ ಗ್ರಾಮದ ಬಳಿ ಜಗದೀಶ್(10) ಎನ್ನುವ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ವಾಹನವೊಂದರಲ್ಲಿ ಬಂದಿದ್ದ ಅಪಹರಣಕಾರರು ಬಾಲಕ ಹೊಲಕ್ಕೆ ಹೋಗಿ ವಾಪಸ್ಸಾಗುವಾಗ ಅವನನ್ನು ಅಪಹರಿಸಿದ್ದಾರೆ. ಬಾಲಕನ ಪೋಷಕರು ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಗ ಪೋಲೀಸರು ಆರೋಪಿಗಳಿಗಾಗಿ ಬಲೆ ಬಿಸಿದ್ದರು.
ಹೀಗಿರುವಾಗ ಅಪಹರಣಕ್ಕೊಲಗಾಗಿದ್ದ ಬಾಲಕ ಆಂಧ್ರದ ರಾಯದುರ್ಗದಲ್ಲಿ ಸಿಕ್ಕಿದ್ದು ಬಾಲಕನನ್ನು ಅಪಹರಿಸಿದ್ದ ಆಂಧ್ರ ಮೂಲದ ನಾನಾಜಿ, ದುರ್ಗಾ ಪ್ರಸಾದ್, ಚಪ್ಪತಲಬಾಲು ರಾಜು, ಗುರ್ತಿ ನಾನಾಜಿ, ನಾಗಿರೆಡ್ಡಿ ಹಾಗೂ ದಮ್ಮು ಶಿವ  ಅವರುಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.
ಮೊಳಕಾಲ್ಮೂರು ಠಾಣೆ ಪೋಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರ್ರೆ. ಬಾಲಕನ ಅಪಹರಣದ ಹಿಂದಿನ ಕಾರಣ ಮಾತ್ರ ಇನ್ನೂ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com