ಬೆಂಗಳೂರು ಉದ್ಯಮಿ ಅಪಹರಣ ಕೇಸ್: 24 ಗಂಟೆಯಲ್ಲೇ ಐವರನ್ನು ಬಂಧಿಸಿದ ಪೊಲೀಸರು

ಅಪಹರಣಕ್ಕೊಳಗಾಗಿದ್ದ ಆಟೋ ಮೊಬೈಲ್ ಡೀಲರ್ ನನ್ನು ರಕ್ಷಿಸಿರುವ ಮಾಗಡಿ ರೋಡ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:ಅಪಹರಣಕ್ಕೊಳಗಾಗಿದ್ದ ಆಟೋ ಮೊಬೈಲ್ ಡೀಲರ್ ನನ್ನು ರಕ್ಷಿಸಿರುವ ಮಾಗಡಿ ರೋಡ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ನವೀನ್ ಕುಮಾರ್ ಎಂಬಾತನನ್ನು ಬಂಧಿಸಿದ್ದ ಆರೋಪಿಗಳು ರಾಮಮೂರ್ತಿ ನಗರದ ಮನೆಯೊಂದರಲ್ಲಿ ಬಂಧಿಸಿಟ್ಟಿದ್ದರು.
ರೌಡಿನಾಗ ಅಲಿಯಾಸ್ ಗೆಡ್ಡ ನಾಗರಾಜ್, ಮೊಹಮದ್ ಅಮೀರ್, ಪ್ರಕಾಶ್, ಮುನಿರಾಜು, ಮತ್ತು ರಘು ಬಂಧಿತ ಆರೋಪಿಗಳಾಗಿದ್ದಾರೆ. ಇವರು  ಬ್ಯಾಟರಾಯನಪುರ ಮತ್ತು ವಿಜಯನಗರ ನಿವಾಸಿಗಳಾಗಿದ್ದಾರೆ.
ಕೆ.ಪಿ ಅಗ್ರಹಾರದ ಟೆಲಿಕಾಂ ಲೇಔಟ್ ನಿವಾಸಿಯಾಗಿರುವ ನವೀನ್ ಪ್ರೀ ಓನಡ್ ಕಾರ್(Pre owned Car sales) ಸೇಲ್ಸ್ ವ್ಯವಹಾರ ಮಾಡುತ್ತಿದ್ದ. ಅಕ್ಟೋಬರ್ 13 ರಂದು  ನವೀನ್ ನಾಗರಾಜ್ ಬಳಿಯಿಂದ 26 ಲಕ್ಷ ರು ಹಣ ಪಡೆದಿದ್ದ. ಆತನಿಗೆ ಹೈಎಂಡ್ ಕಾರು ಕೊಡಿಸುವುದಾಗಿ ಹೇಳಿದ್ದ.  ನವೀನ್ ಇದೇ ರೀತಿ ಹಲವು ಮಂದಿಗೆ ವಂಚಿಸಿರುವುದು ಕೆಲ ದಿನಗಳ ಬಳಿಕ ನಾಗರಾಜ್ ಗೆ ಗೊತ್ತಾಗಿದೆ, ಹೀಗಾಗಿ ಹಣ ವಾಪಸ್ ನೀಡುವಂತೆ ನವೀನ್ ಗೆ ನಾಗರಾಜ್ ಒತ್ತಾಯಿಸಿದ್ದಾನೆ.  ಹಣ ಕೊಡಲು ನಿರಾಕರಿಸಿದ ನವೀನ್ ಒಂದು ವಾರದಲ್ಲಿ ಕಾರು ಕೊಡುವುದಾಗಿ ಹೇಳಿದ್ದಾನೆ.
ಆತನ ಮಾತನ್ನು ನಂಬದ ನಾಗರಾಜ್ ನವೀನ್ ನನ್ನು ಕಿಡ್ನಾಪ್ ಮಾಡಲು ಯೋಜನೆ ರೂಪಿಸಿದ. ಒಂದು ಕಾರಿನಲ್ಲಿ  ನವೀನ್ ನನ್ನು ಅಪಹರಿಸಿದ ಗ್ಯಾಂಗ್ ರಾಮಮೂರ್ತಿ ನಗರದ ಮನೆಯಲ್ಲಿಟ್ಟಿತ್ತು. 
ಶನಿವಾರ ತಡರಾತ್ರಿ ನವೀನ್ ತಂದೆಗೆ ಕೆರ ಮಾಡಿದ  ನಾಗರಾಜ್ ಆತ ಕಿಡ್ನಾಪ್ ಆಗಿರುವುದಾಗಿ ತಿಳಿಸಿದ್ದಾನೆ, ಹಣ ನೀಡದರೇ ಮಾತ್ರ ನವೀನ್ ನನ್ನು ಕಳುಹಿಸುವುದಾಗಿ ಹೇಳಿದ್ದಾನೆ. 
ನವೀನ್ ಪತ್ನಿ ವೈದೇಶ್ವರಿ ಮಾಗಡಿ ರೋಡ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಜಯನಗರದ ಖಾಸಗಿ ಬ್ಯಾಂಕ್ ನಲ್ಲಿ ಹಣ ತೆಗೆದುಕೊಳ್ಳಲು ಬಂದ  ನಾಗರಾಜ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಂತರ ನವೀನ್ ನನ್ನು ಬಂಧಿಸಿಟ್ಟಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ನಾಗರಾಜ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com