ಮಾಜಿ ಡಿವೈಎಸ್ಪಿ ಅನುಪಮಾ ಶೆಣೈರಿಂದ ಹೊಸ ರಾಜಕೀಯ ಪಕ್ಷ 'ಭಾರತೀಯ ಜನಶಕ್ತಿ ಕಾಂಗ್ರೆಸ್' ಘೋಷಣೆ

ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಬಳ್ಳಾರಿ ಜಿಲ್ಲೆ ಕೂಡ್ಲಗಿಯಲ್ಲಿ ಇಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ.
ಮಾಜಿ ಡಿವೈಎಸ್ಪಿ ಅನುಪಮ ಶೆಣೈ
ಮಾಜಿ ಡಿವೈಎಸ್ಪಿ ಅನುಪಮ ಶೆಣೈ
ಕೂಡ್ಲಗಿ: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಬಳ್ಳಾರಿ ಜಿಲ್ಲೆ ಕೂಡ್ಲಗಿಯಲ್ಲಿ ಇಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ. ಜನರಿಗಾಗಿಯೇ ಈ ಪಕ್ಷ ಸ್ಥಾಪಿಸಿದ್ದೇನೆ ಎಂದ ಅನುಪಮಾ  ಬ್ಯಾನರ್​ ಅನಾವರಣಗೊಳಿಸಿ ಪಕ್ಷಕ್ಕೆ ಚಾಲನೆ ನೀಡಿದರು.
ಕೂಡ್ಲಗಿಯಲ್ಲಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ನೂತನ ಪಕ್ಷದ ಹೆಸರನ್ನು ಘೋಷಿಸಿದರು. ಅಲ್ಲದೇ ನೂತನ ಪಕ್ಷವು ಪ್ರಜಾಪ್ರಭುತ್ವದ ರಕ್ಷಣೆ, ಮದ್ಯಮುಕ್ತ ಸಮಾಜ, ಸರ್ಕಾರಿ ನೌಕರರಿಗೆ ಪ್ರೋತ್ಸಾಹ, ಇದೇ ಮೊದಲಾದ ದ್ಯೇಯೋದ್ದೇಶಗಳನ್ನು ಹೊಂದಿದೆ.
ಭಾರತೀಯ ನಕ್ಷೆ, ತ್ರಿವರ್ಣ ಧ್ವಜದ ಬಣ್ಣ ಬಳಸಿರುವ ಚಿತ್ರ ಪಕ್ಷದ ಚಿಹ್ನೆಯಾಗಿದ್ದು ಚಿಹ್ನೆ ಮತ್ತು ಹೆಸರು ಚುನಾವಣಾ ಆಯೋಗದಿಂದ ಇನ್ನಷ್ಟೇ ಅಧಿಕೃತಗೊಳ್ಳಬೇಕಾಗಿದೆ. 
ಪಕ್ಷ ಉದ್ಘಾಟಿಸಿ ಮಾತನಾಡಿದ ಅನುಪಮಾ ಶೆಣೈ, "ಸಚಿವರಾದ ಡಿಕೆ ಶಿವಕುಮಾರ್ ನೀವೇಕೆ ರಾಜಕೀಯಕ್ಕೆ ಬರಬಾರದು ಎಂದು ಹಿಂದೊಮ್ಮೆ ಕೇಳಿದ್ದರು. ಅವರ ಮಾತು ಇಂದು ನಿಜವಾಗಿದೆ" ಎಂದಿದ್ದಾರೆ.
ನಿನ್ನೆಯಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಉಪೇಂದ್ರ ತಮ್ಮ ಹೊಸ ರಾಜಕೀಯ ಪಕ್ಷ 'ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ'ವನ್ನು ಘೋಷಣೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com