ಕನ್ನಡ ರಾಜ್ಯೋತ್ಸವ: ಬಿಬಿಎಂಪಿ ಉದ್ಯಾನಗಳು ಸೇರಿ ನಗರದೆಲ್ಲೆಡೆ ಕನ್ನಡ ಧ್ವಜ ಹಾರಾಟ

ಬೆಂಗಳೂರಿನ ಎಲ್ಲಾ ಬಿಬಿಎಂಪಿ ಉದ್ಯಾನವನಗಳು, ಪಾಲಿಕೆ ಕಚೇರಿಗಳು ಮತ್ತು ನಗರದ ಉದ್ದಗಲಕ್ಕೂ ಇರುವ ಪ್ರಮುಖ ವೃತ್ತಗಳು ಮತ್ತು ಜಂಕ್ಷನ್ ಗಳಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ........
ಕರ್ನಾಟಕ ರಾಜ್ಯೋತ್ಸವ: ಬಿಬಿಎಂಪಿ ಉದ್ಯಾನಗಳು ಸೇರಿ ನಗರದೆಲ್ಲೆಡೆ ಕನ್ನಡ ಧ್ವಜ ಹಾರಾಟ
ಕರ್ನಾಟಕ ರಾಜ್ಯೋತ್ಸವ: ಬಿಬಿಎಂಪಿ ಉದ್ಯಾನಗಳು ಸೇರಿ ನಗರದೆಲ್ಲೆಡೆ ಕನ್ನಡ ಧ್ವಜ ಹಾರಾಟ
ಬೆಂಗಳೂರು: ಬೆಂಗಳೂರಿನ ಎಲ್ಲಾ ಬಿಬಿಎಂಪಿ ಉದ್ಯಾನವನಗಳು, ಪಾಲಿಕೆ ಕಚೇರಿಗಳು ಮತ್ತು ನಗರದ ಉದ್ದಗಲಕ್ಕೂ ಇರುವ ಪ್ರಮುಖ ವೃತ್ತಗಳು ಮತ್ತು ಜಂಕ್ಷನ್ ಗಳಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಬಿಬಿಎಂಪಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಿದೆ. ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಮೇಯರ್ ಸಂಪತ್ ರಾಜ್ ಅವರ ಸೂಚನೆಯ ಮೇರೆಗೆ ಈ ಸುತ್ತೋಲೆಯನ್ನು ನೀಡಲಾಗಿದೆ ಎಂದು ಬಿಬಿಎಂಪಿ ಪ್ರಧಾನ ಕಛೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕಳೆದ ಜೂನ್ ನಲ್ಲಿ ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಬೇಡಿಕೆಯನ್ನು ಪರಿಶೀಲಿಸಲು 9 ಸದಸ್ಯರ ಸಮಿತಿಯನ್ನು ರಚಿಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅವರು ಆದೇಶ ನೀಡಿದ್ದರು. ಸಮಿತಿ ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಿಪಿಎಆರ್ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಕಾರ್ಯದರ್ಶಿ - ಗೃಹ ಅಧ್ಯಕ್ಷ- ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರುಗಳನ್ನು ಒಳಗೊಂಡಿದೆ. ಆದರೆ ಈ ಐದು ತಿಂಗಳಲ್ಲಿ ಸಮಿತಿ ಸದಸ್ಯರು ಒಮ್ಮೆ ಸಹ ಸಭೆ ನಡೆಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com