ಬೆಂಗಳೂರು ಮೂಲದ ವಿಜ್ಞಾನಿ ಗೆ ಮಾರ್ಕೋನಿ ಯಂಗ್ ಅಚೀವರ್ 2017 ಪ್ರಶಸ್ತಿ

ಬೆಂಗಳೂರು ಮೂಲದ ವಿಜ್ಞಾನಿ ,ಯುಎಸ್-ಮಾರ್ಕೋನಿ ಯಂಗ್ ಅಚೀವರ್ 2017 ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಆನಂದ ತೀರ್ಥ ಸುರೇಶ್
ಆನಂದ ತೀರ್ಥ ಸುರೇಶ್
ಬೆಂಗಳೂರು: ಬೆಂಗಳೂರು ಮೂಲದ ವಿಜ್ಞಾನಿ ,ಯುಎಸ್-ಮಾರ್ಕೋನಿ ಯಂಗ್ ಅಚೀವರ್ 2017 ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಮಾರ್ಕೊನಿ ಸೊಸೈಟಿ, ಗೂಗಲ್ ವಿಜ್ಞಾನಿ ಆನಂದ ತೀರ್ಥ ಸುರೇಶ್ ಅವರಿಗೆ ಪಾಲ್ ಬರಾನ್ ಯಂಗ್ ಸ್ಕಾಲರ್ ಪ್ರಶಸ್ತಿಯನ್ನು ಗೌರವಿಸಲು ನಿರ್ಧರಿಸಿದೆ. 
ಪ್ರತಿ ವರ್ಷ, ವೈಜ್ಞಾನಿಕ ಅಥವಾ ತಾಂತ್ರಿಕ ಅನ್ವೇಷಣೆಗಳ ಮೂಲಕ ಮಾನವಕುಲದ ಪ್ರಯೋಜನಕ್ಕಾಗಿ, ಸಂವಹನ ಪ್ರಗತಿಗಾಗಿ ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಮಾರ್ಕೋನಿ ಸೊಸೈಟಿ ಪ್ರಕಾರ, ಮಾರ್ಕೋನಿ ಪ್ರಶಸ್ತಿಯನ್ನು ಸ್ವೀಕರಿಸಿದವರು ಮಾರ್ಕೊನಿ ಫೆಲೋಗಳನ್ನು ನಿರ್ಧರಿಸುತ್ತಾರೆ. ಮತ್ತು ಸಂವಹನ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಸೃಜನಶೀಲ ಕೆಲಸವನ್ನು ಮುಂದುವರೆಸುತ್ತಾರೆ.
ಉದಾಹರಣೆಗೆ, ಸುರೇಶ್ ರ ಸಂಶೋಧನೆ ಬೇಸಿಕ್ ಫೀಚರ್  ಫೋನ್  ಬಳಸುವ ಭಾರತೀಯ ಬಳಕೆದಾರರಿಗೆ ಸಹಾಯ ಆಗುತ್ತದೆ, ನೆಟ್ ಸಂಪರ್ಕ ನಿಧಾನವಾಗಿದ್ದರೂ ಅಂತರ್ಜಾಲ ಹುಡುಕಾಟವನ್ನು ನಡೆಸಲು ಇದರಿಂದ ಸಹಾಯವಾಗಲಿದೆ. 
ಸುರೇಶ್ ಅವರು ಬೆಂಗಳೂರಿನಲ್ಲಿ ಜನಿಸಿದರು. ವಿಜಯ ಪ್ರೌಢಶಾಲೆ, ಶ್ರೀ ರಾಜರಾಜೇಶ್ವರಿ ವಿದ್ಯಾ ಮಂಡಿರಾ ಮತ್ತು ಜಯನಗರ ಏಳನೇ ಬ್ಲಾಕ್ ನಲ್ಲಿರುವ ನ್ಯಾಷನಲ್ ಕಾಲೇಜ್ ನಲ್ಲಿ ತಮ್ಮ ಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸ ಮಾಡಿದರು. 
2010 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಮದ್ರಾಸ್ ನಲ್ಲಿ ಇಂಜಿನಿಯರಿಂಗ್ ಫಿಸಿಕ್ಸ್ ನಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು. 2010 ಮತ್ತು 2016 ರ ನಡುವೆ ಸ್ಯಾನ್ ಡಿಯಾಗೋದಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಮತ್ತು ಪಿಎಚ್ ಡಿ ಯನ್ನು ಮಾಡಿದ್ದ ಸುರೇಶ್ ಅಮೆರಿಕಕ್ಕೆ ನೆಲೆಸಿದ್ದರು. 
ಪ್ರಶಸ್ತಿ ವಿಜೇತರನ್ನು ಅಂತಾರಾಷ್ಟ್ರೀಯ ಮಟ್ಟದ ಎಂಜಿನಿಯರ್ ಗಳು ಆಯ್ಕೆ ಮಾಡುತ್ತಾರೆ. ವಿಜೇತರು ವಾರ್ಷಿಕ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಲು ಬೇಕಾದ ಅಗತ್ಯ ವೆಚ್ಚದೊಡನೆ 4,000 ಡಾಲರ್ ನಗದು ಬಹುಮಾನವನ್ನು ಪಡೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com