ಸಾಕಷ್ಟು ಮಳೆಯಾಗದ ಹಿನ್ನೆಲೆ: ಬೆಳಗಾವಿಯಲ್ಲಿ ಗಣೇಶ ಮೂರ್ತಿಯನ್ನು ಸಮಾಧಿ ಮಾಡಿದ ರೈತ

ಗಣೇಶ ತಮ್ಮ ಊರಿಗೆ ಬೇಕಾಗಿರುವಷ್ಟು ಮಳೆ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ರೈತನೊಬ್ಬ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲು ಗುಂಡಿಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಗಣೇಶ ತಮ್ಮ ಊರಿಗೆ ಬೇಕಾಗಿರುವಷ್ಟು ಮಳೆ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ರೈತನೊಬ್ಬ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲು ಗುಂಡಿಯಲ್ಲಿ ಹೂತಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲೆಯ ರಾಯಭಾಗ ತಾಲೂಕಿನ ನಸಲಾಪುರ ಗ್ರಾಮದ 24 ವರ್ಷದ ಶಿವನಗೌಡ ಪಾಟೀಲ್, ತಮ್ಮ ಮನೆಯಲ್ಲಿ ಗಣೇಶ ಕೂರಿಸಿದ್ದರು. ಮಂಗಳವಾರ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕಿತ್ತು,  ಆದರೆ ಗಣೇಶನನ್ನು ವಿಸರ್ಜಿಸುವ ಬದಲು ಎರಡು ಅಡಿ ಗುಂಡಿ ತೋಡಿದ ಪಾಟೀಲ್, ಗುಂಡಿಯಲ್ಲಿ ಗಣೇಶ ಮೂರ್ತಿಯನ್ನು ಸಮಾಧಿ ಮಾಡಿದ್ದಾನೆ. 
ಈ ವೇಳೆ  ಉಪಸ್ಥಿತರಿದ್ದ ಆತನ ಸ್ನೇಹಿತರು ಮತ್ತು ಕುಟುಂಬಸ್ಥರು ಗಣೇಶ್ ಬಪ್ಪ ಮೋರ್ಯ ಎಂಬ ಘೋಷಣೆ ಕೂಗಿದರು. 2005ರಿಂದ ಈ ಭಾಗದಲ್ಲಿ ಸಾಕಷ್ಟು ಮಳೆ ಬೀಳುತ್ತಿಲ್ಲ, ಹೀಗಾಗಿ ಉತ್ತಮ ಮಳೆಗಾಗಿ ಪ್ರತಿದಿನ ಗಣೇಶನಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ಬರದಿಂದ ಕಂಗೆಟ್ಟಿದ್ದ ನಮ್ಮ ಕುಟುಂಬ ಕೂಡ ಮಳೆಗಾಗಿ ಗಣೇಶನನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿತ್ತು. 
ಗಣೇಶ ಮೂರ್ತಿಯನ್ನು ಸಮಾಧಿ ಮಾಡುವುದರಿಂದ ಕೆಟ್ಟ ಪರಿಣಾಮಗಳಾಗುತ್ತವೆ ಎಂದು ಹೆದರಿದ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಮೊದಲಿಗೆ ವಿರೋಧ ವ್ಯಕ್ತ ಪಡಿಸಿದರು, ನಂತರ ಒಪ್ಪಿಕೊಂಡರು.
ಮಳೆಗಾಗಿ ತನ್ನ ಹಾಗೂ ತನ್ನ ಕುಟುಂಬಸ್ಥರು ಮಾಡಿದ ಪ್ರಾರ್ಥನೆಯನ್ನು ಅಲಿಸದ ಗಣೇಶನ ಮೇಲೆ ನನಗೆ ಕೋಪ ಬಂದಿತ್ತು. ರಾಯಭಾಗದಲ್ಲಿ  ಶೇ. 80 ರಷ್ಟು ವ್ಯವಸಾಯ ಮಾಡಲಾಗಿದೆ, ಆದರೆ ಚಿಕ್ಕೋಡಿ ಮತ್ತು ಅಥಣಿ ತಾಲೂಕಿನಲ್ಲಿ ಮಳೆಯಿಲ್ಲದೇ ಎಲ್ಲಾ ಒಣಗಿ ನಿಂತಿದೆ ಎಂದು ಹೇಳಿದ್ದಾರೆ.
ಗಣೇಶನನ್ನು ಸಮಾಧಿ ಮಾಡಿರುವುದರಿಂದ, ಗಣೇಶನಿಗೂ ಭೂಮಿಯ ತಾಪ ಗೊತ್ತಾಗಲಿದೆ, ತಮ್ಮ ತಾಲೂಕಿನ ಸುತ್ತ ಮುತ್ತಲಿ ಎಲ್ಲಾ ಗ್ರಾಮಗಳಲ್ಲಿಯೀ ನೈಸರ್ಗಿರಕ ಜಲ ಮೂಲಗಳು ಬತ್ತಿ ಹೋಗಿವೆ, ಗಣೇಶ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ  ಜನರು ಇಲ್ಲಿಂದ 4 ಕಿಮೀ ದೂರದಲ್ಲಿರುವ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ. 
ಹೀಗಾಗಿ ನಮಗೆ ಅಗತ್ಯವಾದ ನೀರನ್ನು ಕೊಡದ ಗಣೇಶನನ್ನು ನಾವು ಏಕೆ ವಿಸರ್ಜನೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com