ಭಟ್ಕಳ: ಅಂಗಡಿ ತೆರವಿಗೆ ಮುಂದಾದ ತಾಲೂಕು ಆಡಳಿತ, ಸಾರ್ವಜನಿಕರಿಂದ ತೀವ್ರ ವಿರೋಧ

ಟ್ಕಳ ನಗರದಲ್ಲಿ ಇಂದು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪುರಸಭೆ ಕಛೇರಿ ಮೇಲೆ ಪ್ರತಿಭಟನಾ ಕಾರರು ಕಲ್ಲು ತೂರಿದ ಕಾರಣ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಭಟ್ಕಳದಲ್ಲಿ ಉದ್ವಿಗ್ನ ವಾತಾವರಣ
ಭಟ್ಕಳದಲ್ಲಿ ಉದ್ವಿಗ್ನ ವಾತಾವರಣ
ಭಟ್ಕಳ: ಭಟ್ಕಳ ನಗರದಲ್ಲಿ ಇಂದು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪುರಸಭೆ ಕಛೇರಿ ಮೇಲೆ ಪ್ರತಿಭಟನಾ ಕಾರರು ಕಲ್ಲು ತೂರಿದ ಕಾರಣ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಗಲಭೆ ಹೆಚ್ಚಳ ಆಗುವ ಮುನ್ಸೂಚನೆ ಕಾರಣದಿಂದ ನಗರದ ಶಾಲಾ ಕಾಲೇಜುಗಳನ್ನು ಮುಚ್ಚಲಾಯಿತು.
ಭಟ್ಕಳ ಪುರಸಭೆ ವ್ಯಾಪಾರಸ್ಥರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಅದರ 34 ಅಂಗಡಿಗಳನ್ನು ವ್ಯಾಪಾರಥರಿಂದ ಮರಳಿ  ವಶಕ್ಕೆ ಪಡೆದಿರುವುದನ್ನು  ವಿರೋಧಿಸಿ ಪ್ರತಿಭಟನೆ ನಡೆಸಲಾಉತ್ತಿತ್ತು.
ಪ್ರತಿಭಟನೆ ವೇಳೆ ರಾಮಚಂದ್ರ ನಾಯಕ್ ಎನ್ನುವ ಓರ್ವ ಅಂಗಡಿ ಮಾಲೀಕ, ಪುರಸಭೆ ಸಂಕೀರ್ನದಲ್ಲಿಯೇ ತಾನು ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದಾರೆ.
ಅವರನ್ನು ರಕ್ಷಿಸಲು ಹೋದ ಅವರ ಸಹೋದರ ಈಶ್ವರ ನಾಯಕ ಕೂಡ ಘಟನೆಯಲ್ಲಿ ಗಾಯಗೊಂಡಿದ್ದರು. ರಾಮಚಂದ್ರ ಮತ್ತು ಈಶ್ವರ್ ಇಬ್ಬರನ್ನೂ ಚ್ಫಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ನಂತರ, ಸ್ಥಳೀಯ ಜನರು ಪ್ರತಿಭಟನೆ ನಡೆಸಿದರು, ಮತ್ತು ಕೆಲವರು ಪುರಸಭೆ ಕಛೇರಿಯತ್ತ ಕಲ್ಲುಗಳನ್ನು ತೂರಿದ್ದಾರೆ. ಜಿಲ್ಲಾಡಳಿತವು ಪರಿಸ್ಥಿತಿ ನಿಯಂತ್ರಿಸಲು ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.
ಏತನ್ಮಧ್ಯೆ, ಸ್ಥಳೀಯ ಜನರು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ 66 (ಮಂಗಳೂರು-ಮುಂಬೈ) ಯನ್ನು ಬಂದ್ ಮಾಡುವ ಬೆದರಿಕೆ ಹಾಕಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಭರವಸೆ ನೀಡಿದ ನಂತರ ಜನರು ಶಾಂತಿಯಿಂದ ಹಿಂತಿರುಗಿದರು. 
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್ ಬೈಯಾಕೋಡ್ ಸ್ಥಳಕ್ಕೆ ಭೇಟಿ ನೀಡಿದರು. ಇಬ್ಬರು ಉಪ ಕಮೀಷನರ್ ಗಳಾದ ಎಸ್. ಎಸ್.ನಕುಲ್ ಮತ್ತು ಎಸ್ಪಿ ವಿನಯಕ್ ಪಾಟೀಲ್ ಅವರು ಸಹ ಸ್ಥಳಕ್ಕೆ ಧಾವಿಸಿದ್ದಾರೆ. "ಕಲ್ಲು ತೂರಾಟ ಮುಂದುವರಿದಲ್ಲಿ ಭಟ್ಕಳದಲ್ಲಿ ಕರ್ಫ್ಯೂ ಅಥವಾ ಸೆಕ್ಷನ್ 144 ಜಾರಿ ಮಾಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com