ರಾಕ್ಷಸಿ ಪ್ರವೃತ್ತಿಯ ಸಿದ್ದರಾಮಯ್ಯ, ಕಂಸ, ರಾವಣ, ದುರ್ಯೋಧನನಂತೆ: ಕಲ್ಲಡ್ಕ ಪ್ರಭಾಕರ್ ಭಟ್

ರಾಕ್ಷಸಿ ಪ್ರವೃತ್ತಿಯ ಸಿದ್ದರಾಮಯ್ಯ ಪುರಾಣ ಕಥೆಗಳಲ್ಲಿ ಬರುವ ಕಂಸ, ರಾವಣ ಹಾಗೂ ದುರ್ಯೋಧನನಿದ್ದಂತೆ ಎಂದರು ..
ಕಲ್ಲಡ್ಕ ಪ್ರಭಾಕರ್ ಭಟ್
ಕಲ್ಲಡ್ಕ ಪ್ರಭಾಕರ್ ಭಟ್
ಮೈಸೂರು: ಆರ್ ಎಸ್ ಎಸ್‌  ಮುಖಂಡ ಹಾಗೂ ಹಿಂದೂ ಸಮಾಜೋತ್ಸವ ಸಂಸ್ಥಾಪಕ ಡಾ.ಕಲ್ಲಡ್ಕ ಪ್ರಭಾಕರ ಭಟ್‌  ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ದಕ್ಷಿಣ ಕನ್ನಡದ ಶ್ರೀರಾಮ ವಿದ್ಯಾಶಾಲೆಗೆ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಸರಬರಾಜು ನಿಲ್ಲಿಸಿದ ಹಿನ್ನೆಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ಶ್ರೀರಾಮ ವಿದ್ಯಾಶಾಲೆಯಲ್ಲಿ ಶೇ.94 ರಷ್ಟು ಮಕ್ಕಳು, ಅಹಿಂದ ಸಮುದಾಯದವರು, ಆದಿವಾಸಿ ಜನಾಂಗದವರು, ದಲಿತರು ಹಾಗೂ ಹಿಂದುಳಿದ ವರ್ಗದವರಾಗಿದ್ದಾರೆ ಎಂದು ಹೇಳಿದರು. 
ಶ್ರೀರಾಮ ವಿದ್ಯಾಶಾಲೆಗಾಗಿ  ಮೈಸೂರಿನಲ್ಲಿ ಭಿಕ್ಷಾಂದೇಹಿ ಕಾರ್ಯಕ್ರಮ ಹಮ್ಮಿಕೊಂಡು ಹೋಟೆಲ್ ಮಾಲಿಕರ ಸಂಘದಿಂದ 555 ಚೀಲ ಅಕ್ಕಿ ಸ್ವೀಕರಿಸಿದರು.
ರಾಕ್ಷಸಿ ಪ್ರವೃತ್ತಿಯ ಸಿದ್ದರಾಮಯ್ಯ ಪುರಾಣ ಕಥೆಗಳಲ್ಲಿ ಬರುವ ಕಂಸ, ರಾವಣ ಹಾಗೂ ದುರ್ಯೋಧನನಿದ್ದಂತೆ ಎಂದರು. ಸಿದ್ದರಾಮಯ್ಯ ಅವರೇ ದಯವಿಟ್ಟು ನಮ್ಮ ಶಾಲೆಗೆ ಬನ್ನಿ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನೂ ಕರೆತನ್ನಿ. ಮಕ್ಕಳೊಂದಿಗೆ ಕುಳಿತು ಊಟ ಮಾಡಿ ಎಂದು ಬಹಿರಂಗ ಆಹ್ವಾನ ನೀಡಿದರು. 
ಪೈಶಾಚಿಕ ಪ್ರವೃತ್ತಿ ಇರುವ ಸಿದ್ದರಾಮಯ್ಯ ಅವರ ಸರ್ಕಾರದಿಂದ ಶಾಲೆಗೆ ಯಾವುದೇ ಅನುದಾನ ಸಹಾಯ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ನನಗೆ ಗೌರಿಯಾಗಲಿ, ಅವರ ಪತ್ರಿಕೆಯ ಬಗ್ಗೆಯಾಗಲಿ ತಿಳಿದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com