ಸಿದ್ದರಾಮಯ್ಯ ಸರ್ಕಾರ ಐದು ಪಟ್ಟು ಹೆಚ್ಚು ಭೂಮಿ ಡಿನೋಟಿಫೈ ಮಾಡಿದೆ: ಯಡಿಯೂರಪ್ಪ ಪರ ವಕೀಲ

ಡಾ.ಶಿವರಾಮ ಕಾರಂತ ಲೇ ಔಟ್ ಗೆಂದು 2014 ಮಾರ್ಚ್-ಏಪ್ರಿಲ್ ನಲ್ಲಿ ಪಡೆದಿದ್ದ 1,300 ಎಕರೆ...
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಡಾ.ಶಿವರಾಮ ಕಾರಂತ ಲೇ ಔಟ್ ಗೆಂದು 2014 ಮಾರ್ಚ್-ಏಪ್ರಿಲ್ ನಲ್ಲಿ ಪಡೆದಿದ್ದ 1,300 ಎಕರೆ ಭೂಮಿಯನ್ನು ಸಿದ್ದರಾಮಯ್ಯ ಸರ್ಕಾರ ಒಂದೇ ಬಾರಿಗೆ ಡಿನೋಟಿಫೈಡ್ ಮಾಡಿದೆ. ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಲು ಶಿಫಾರಸು ಮಾಡಿದ ಭೂಮಿಗಿಂತ 5 ಪಟ್ಟು ಅಧಿಕವಾಗಿದೆ ಎಂದು ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ತಿಳಿಸಿದ್ದಾರೆ.
ನಿನ್ನೆ ಹೈಕೋರ್ಟ್ ಗೆ ವಿವರ ಸಲ್ಲಿಸಿದ ಅವರು, ಸಿದ್ದರಾಮಯ್ಯನವರು 1,300 ಎಕರೆ ಜಮೀನನ್ನು ಡಿನೋಟಿಫೈ ಮಾಡಲು ಸುಮಾರು 200 ಬಾರಿ ಸೂಚನೆ ಕಳುಹಿಸಿದ್ದಾರೆ. ಅವುಗಳಲ್ಲಿ 10 ಸೂಚನೆಗಳು ಹಾಲಿ ಶಾಸಕ ಭೈರತಿ ಬಸವರಾಜು ಅವರ ಪರವಾಗಿದೆ ಎಂದು ಆರೋಪಿಸಿದ್ದಾರೆ.
ಭೂಮಿಯ ಡಿನೋಟಿಫಿಕೇಶನ್ ಕೇಸಿಗೆ ಸಂಬಂಧಪಟ್ಟಂತೆ ಭ್ರಷ್ಟಾಚಾರ ನಿಗ್ರಹ ದಳ ತಮ್ಮ ವಿರುದ್ಧ ದಾಖಲಿಸಿರುವ ಎರಡು ಎಫ್ ಐಆರ್ ಗೆ ನ್ನು ಪ್ರಶ್ನಿಸಿ ಯಡಿಯೂರಪ್ಪನವರು ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ನಡೆಸುತ್ತಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಡಾ.ಶಿವರಾಮ ಕಾರಂತ ಲೇ ಔಟ್ ಗೆಂದು ಮೀಸಲಾಗಿದ್ದ ಸುಮಾರು 3,546 ಎಕರೆ ಜಮೀನಿನಲ್ಲಿ 257 ಎಕರೆ ಜಮೀನನ್ನು ಡಿನೋಟಿಫಿಕೇಶನ್ ಮಾಡಿದ್ದರು ಎಂಬ ಆರೋಪ ಅವರ ಮೇಲಿದೆ.
ವಾಸ್ತವವಾಗಿ ಯಡಿಯೂರಪ್ಪನವರ ಡಿನೋಟಿಫಿಕೇಶನ್ ಶಿಫಾರಸನ್ನು ಬಿಡಿಎ ಸ್ವೀಕರಿಸಿರಲಿಲ್ಲ ಎಂದು ಅವರ ಪರ ವಕೀಲ ಹೈಕೋರ್ಟ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com