ಶರತ್ ಕಾಣೆಯಾದ ದಿನ ರಾತ್ರಿ 8.30ಕ್ಕೆ ಆತನ ಪೋಷಕರ ಮೊಬೈಲ್ ಗೆ ನಿಮ್ಮ ಮಗನನ್ನು ಅಪಹರಿಸಿದ್ದು, ಹಣ ಕೊಟ್ಟರೆ ಬಿಡುತ್ತೇವೆ ಎಂಬ ವಾಟ್ಸಾಪ್ ಲ್ಲಿ ಬಂದಿತ್ತು. ವಿಡಿಯೊದಲ್ಲಿ ಶರತ್ ಮಾತನಾಡಿದ್ದು, ತನಗೆ ಅಪಹರಣಕಾರರು ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.