ಸಾಂದರ್ಭಿಕ ಚಿತ್ರ
ರಾಜ್ಯ
ಉಡುಪಿ: ಸುರತ್ಕಲ್ ಬಳಿ ನೇತ್ರಾವತಿ ಎಕ್ಸ್ ಪ್ರೆಸ್ ನಲ್ಲಿ ಚಿನ್ನದ ವ್ಯಾಪಾರಿಯ ದರೋಡೆ
ಇಲ್ಲಿನ ಸುರತ್ಕಲ್ ಹತ್ತಿರ ರೈಲಿನಲ್ಲಿ ನಾಲ್ವರು ಯುವಕರ ಗುಂಪು ಆಭರಣ ಅಂಗಡಿ ಮಾಲಿಕರನ್ನು ಚಾಕು ತೋರಿಸಿ...
ಉಡುಪಿ: ಇಲ್ಲಿನ ಸುರತ್ಕಲ್ ಹತ್ತಿರ ರೈಲಿನಲ್ಲಿ ನಾಲ್ವರು ಯುವಕರ ಗುಂಪು ಆಭರಣ ಅಂಗಡಿ ಮಾಲಿಕರನ್ನು ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಿದ ಘಟನೆ ನಿನ್ನೆ ಬೆಳಗ್ಗೆ 6.30ರ ಸುಮಾರಿಗೆ ನಡೆದಿದೆ.
ಮುಂಬೈ ಮತ್ತು ತಿರುವನಂತಪುರಂ ನಡುವೆ ಪ್ರತಿದಿನ ಸಂಚರಿಸುವ ರೈಲು ನೇತ್ರಾವತಿ ಎಕ್ಸ್ ಪ್ರೆಸ್ ನಲ್ಲಿ ರಾಜಸ್ತಾನ ಮೂಲದ ಜ್ಯುವೆಲ್ಲರ್ ಮಾಲಿಕ ರಾಜೇಂದ್ರ ಸಿಂಗ್ ಸಂಚರಿಸುತ್ತಿದ್ದರು.
ಈ ಘಟನೆ ನಡೆಯುವ ಹೊತ್ತಿಗೆ ರೈಲು ಸುರತ್ಕಲ್ ಸ್ಟೇಷನ್ ಹತ್ತಿರ ಸಾಗುತ್ತಿತ್ತು. ಮಲಗಿದ್ದ ರಾಜೇಂದ್ರ ಸಿಂಗ್ ರನ್ನು ನಾಲ್ವರು ಯುವಕರ ಗುಂಪು ಎದ್ದೇಳುವಂತೆ ಹೇಳಿ ನಂತರ ದರೋಡೆ ಮಾಡಿದರು.
ರಾಜೇಂದ್ರ ಸಿಂಗ್ ಅವರು ಪ್ರಯಾಣಿಸುವಾಗ ಚಿನ್ನವನ್ನು ಕೊಂಡೊಯ್ಯುತ್ತಿದ್ದುದನ್ನು ಯುವಕರ ಗ್ಯಾಂಗ್ ಕಳೆದ ಹಲವು ದಿನಗಳಿಂದ ನೋಡುತ್ತಿದ್ದಿರಬಹುದು ಮತ್ತು ಅವರನ್ನು ಹಿಂಬಾಲಿಸುತ್ತಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮುಂದಿನ ತನಿಖೆ ನಡೆಸಲಾಗುತ್ತಿದೆ.ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ