ಮೈಸೂರು, ಬಳ್ಳಾರಿಯಲ್ಲಿ ನೂತನ ವಿಮಾನ ಸೇವೆ ಆರಂಭ

ಮಂಡಕಳ್ಳಿ ಅಲ್ಲಿನ ಮೈಸೂರು ವಿಮಾನ ನಿಲ್ದಾಣದ ವಿಮಾನ ಸೇವೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮೈಸೂರು-ಚೆನ್ನೈ-ಕೊಚ್ಚಿ ಮಾರ್ಗದಲ್ಲಿ ವಿಮಾನ ಸಂಚಾರ ಪ್ರಾರಂಭಿಸುವುದಾಗಿ ...
ಮೈಸೂರು ಬಳ್ಳಾರಿ ನೂತನ ವಿಮಾನ ಸೇವೆ ಉದ್ಘಾಟಿಸಿದ ಆರ್.ವಿ. ದೇಶಪಾಂಡೆ
ಮೈಸೂರು ಬಳ್ಳಾರಿ ನೂತನ ವಿಮಾನ ಸೇವೆ ಉದ್ಘಾಟಿಸಿದ ಆರ್.ವಿ. ದೇಶಪಾಂಡೆ
ಬೆಂಗಳೂರು: ಮಂಡಕಳ್ಳಿ ಅಲ್ಲಿನ  ಮೈಸೂರು ವಿಮಾನ ನಿಲ್ದಾಣದ ವಿಮಾನ ಸೇವೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮೈಸೂರು-ಚೆನ್ನೈ-ಕೊಚ್ಚಿ ಮಾರ್ಗದಲ್ಲಿ ವಿಮಾನ ಸಂಚಾರ ಪ್ರಾರಂಭಿಸುವುದಾಗಿ  ಬುಧವಾರ ಘೋಷಿಸಲಾಯಿತು. ಇದು ರಾಜ್ಯದಲ್ಲಿ ಘೋಷಿಸಿದ ಎರಡು ಹೊಸ ವಿಮಾನ ಸೇವೆಯಲ್ಲಿ ಒಂದಾಗಿರುತ್ತದೆ.
ಇನ್ನೊಂದು ವಿಮಾನ ಸೇವೆ ಹೈದರಾಬಾದ್-ಬಳ್ಳಾರಿ-ಹೈದರಾಬಾದ್ ಮಾರ್ಗದಲ್ಲಿದ್ದು, ಗುರುವಾರ ಪ್ರಾರಂಭಗೊಳ್ಳಲಿದೆ. ಇವುಗಳು ನರೇಂದ್ರ ಮೋದಿ ಸರ್ಕಾರದ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ವ್ಯಾಪ್ತಿಯಲ್ಲಿ ಬರಲಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್. ವಿ. ದೇಶಪಾಂಡೆ "ಹೊಸ ಮಾರ್ಗಗಳು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀದಲಿವೆ" ಎಂದು ಹೇಳಿದರು. 
ಈ ಸೇವೆಗಳು ಉದ್ಯಮ, ಪ್ರವಾಸೋದ್ಯಮ, ಸಾರಿಗೆ, ವ್ಯಾಪಾರ ಮತ್ತು ವಾಣಿಜ್ಯ ವಲಯಗಳ ಬೆಳವಣಿಗೆಗೆ ಪೂರಕವಾಗುತ್ತವೆ. ಎರಡು ನಗರಗಳಿಗೆ ಕೈಗೆಟುಕುವ ವಾಯು ಸೇವೆಗಳನ್ನು ಒದಗಿಸುತ್ತಿದೆ ಎಂದು ದೇಶಪಾಂಡೆ ಹೇಳಿದ್ದಾರೆ.
ರಾಜ್ಯದಲ್ಲಿನ ಎರಡು ವಿಮಾನ ನಿಲ್ದಾಣಗಳ ಎರಡು ಮಾರ್ಗಗಳನ್ನು ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ ಸಿ ಎಸ್) ಅಡಿಯಲ್ಲಿ ಪ್ರಾರಂಭಿಸಲಾಗಿದೆ. "ಆರ್ ಸಿ ಎಸ್ ಅಡಿಯಲ್ಲಿ, ಏರ್ ಲೈನ್ಸ್ ನಿರ್ವಾಹಕರ ಹರಾಜಿನಲ್ಲಿ ಮೊದಲ ಸುತ್ತಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು - ಮೈಸೂರು, ಬೀದರ್, ಬೆಂಗಳೂರು ಮತ್ತು ಬಳ್ಳಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಮತ್ತು ಏರ್ ಲೈನ್ಸ್ ಕಾರ್ಯಾಚರಣೆಗಳ ಪ್ರಾರಂಭಕ್ಕಾಗಿ, ನಮ್ಮ ಸರ್ಕಾರವು ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ಒದಗಿಸುತ್ತಿದೆ "ಎಂದು ದೇಶಪಾಂಡೆ ಹೇಳಿದರು.
 ಚಿಕ್ಕಮಗಳೂರು, ಮಡಿಕೇರಿ ಮತ್ತು ಕಾರವಾರದಲ್ಲಿ ವಿಮಾನ್ ನಿಲ್ದಾಣ  ಸಂಬಂಧಿತ ಕಾರ್ಯಗಳಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ವಾರ್ಷಿಕ ಯೋಜನೆ 2017-18ರಲ್ಲಿ  89.29 ಕೋಟಿ ರೂ. ವೆಚ್ಚ ಮಾದುತ್ತಿದ್ದು ಉತ್ತಮ ಅಭಿವೃದ್ದಿ ಕಾರ್ಯಗಳಾಗುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com