ಮೋಡ ಬಿತ್ತನೆ ಕಾರ್ಯ ಯಶಸ್ವಿಯಾಗಿದೆ: ಎಚ್.ಕೆ ಪಾಟೀಲ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಮ್ಮಿಕೊಂಡಿದ್ದ ಮೋಡ ಬಿತ್ತನೆ ಕಾರ್ಯಕ್ರಮ ಯಶಸ್ವಿಯಾಗಿದ್ದು ಬಿತ್ತನೆ ಮಾಡಿದ್ದ ಸ್ಥಳದಲ್ಲಿ ಶೇ.10-25 ರಷ್ಟು ...
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಮ್ಮಿಕೊಂಡಿದ್ದ ಮೋಡ ಬಿತ್ತನೆ ಕಾರ್ಯಕ್ರಮ ಯಶಸ್ವಿಯಾಗಿದ್ದು ಬಿತ್ತನೆ ಮಾಡಿದ್ದ ಸ್ಥಳದಲ್ಲಿ ಶೇ.10-25 ರಷ್ಟು ಮಳೆಯಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 37 ದಿನಗಳಲ್ಲಿ ಸುಮಾರು 90 ಗಂಟೆ ಮಾಡಿದ ಮೋಡ ಬಿತ್ತನೆಯಿಂದಾಗಿ ವೈಜ್ಞಾನಿಕ ಸಾಧನೆಯಿಂದಾಗಿ ರಾಜ್ಯಾದ್ಯಂತ ಮಳೆಯಾಗಿದೆ ಎಂದು ತಿಳಿಸಿದ್ದಾರೆ. ಇದು ವಿಜ್ಞಾನದ ಗೆಲುವಾಗಿದೆ.
ಮೋಡ ಬಿತ್ತನೆಯಿಂದ ಕೇವಲ ಮಳೆಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಮಾತ್ರವಲ್ಲ, ಮಣ್ಣಿನ ತೇವಾಂಶ ಕೂಡ ಗಣನೀಯವಾಗಿ ಏರಿಕೆಯಾಗಿದೆ.
ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಎರಡು ವಿಮಾನಗಳಲ್ಲಿ  587 ಸ್ಫೋಟ ನಡೆಸಿದ ಪರಿಣಾಮ, ಚನ್ನಪಟ್ಟಣ, ಮಾಗಡಿ, ಚನ್ನರಾಯಪಟ್ಟಣ, ಅರಸೀಕೆರೆ ಕಡೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಮೋಡ ಚದುರಿ ಹೋಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com