ದೇಶಾದ್ಯಂತ ಆಯುಧ ಪೂಜೆ ಸಂಭ್ರಮ: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ, ವಿಜಯದಶಮಿ ಸಿದ್ಧತೆ

ದೇಶದ್ಯಂತ ಆಯುಧ ಪೂಜೆ ಸಂಭ್ರಮ ಮನೆಮಾಡಿದ್ದು, ದಸರಾ ಹಬ್ಬದ ಪ್ರಮುಖ ಕೇಂದ್ರ ಬಿಂದುವಾಗಿರುವ ಮೈಸೂರು ಅರಮನೆಯಲ್ಲಿ ಈಗಾಗಲೇ ಆಯುಧಗಳ ಸಾಂಪ್ರದಾಯಿಕ ಮೆರವಣಿಗೆಗಳನ್ನು ಮಾಡಲಾಗುತ್ತಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ದೇಶದ್ಯಂತ ಆಯುಧ ಪೂಜೆ ಸಂಭ್ರಮ ಮನೆಮಾಡಿದ್ದು, ದಸರಾ ಹಬ್ಬದ ಪ್ರಮುಖ ಕೇಂದ್ರ ಬಿಂದುವಾಗಿರುವ ಮೈಸೂರು ಅರಮನೆಯಲ್ಲಿ ಈಗಾಗಲೇ ಆಯುಧಗಳ ಸಾಂಪ್ರದಾಯಿಕ ಮೆರವಣಿಗೆಗಳನ್ನು ಮಾಡಲಾಗುತ್ತಿದೆ. 

ರಾಜ್ಯದೆಲ್ಲೆಡೆ ಆಯುಧ ಪೂಜೆಗಳನ್ನು ನಡೆಯುತ್ತಿದ್ದು, ಆಯುಧಗಳನ್ನು ಸಿಂಗರಿಸಿ ಭಕ್ತಿಯಿಂದ ಪೂಜೆಯನ್ನು ನೆರವೇರಿಸಲಾಗುತ್ತದೆ. 

ದಸರಾ ಆಚರಣೆಯ ಕೇಂದ್ರ ಬಿಂದುವಾದ ಮೈಸೂರಿನ ಅರಮನೆಯಲ್ಲಿ ಆಯುಧ ಪೂಜೆ ನಡೆಯುತ್ತಿದ್ದು, ಮೊದಲಿಗೆ ಆರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಯೊಂದಿಗೆ ಹೋಗಿ ಪಟ್ಟದ ಕತ್ತಿ ಹಾಗೂ ಇನ್ನಿತರೆ ಕೆಲವು ಆಯುಧಗಳನ್ನು ತೊಳೆದು ವಿಶೇಷವಾಗಿ ಪೂಜಿಸಲಾಗುತ್ತದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ನೆರವೇರಿಸಲಿದ್ದಾರೆ. 

ಸಂಜೆ 7 ಗಂಟೆಗೆ ಈ ಸಲದ ಅಂತಿಮ ಖಾಸಗಿ ದರ್ಬಾರ್ ನಡೆಯಲಿದ್ದು, ಚಾಮುಂಡಿ ಬೆಟ್ಟದಲ್ಲಿ ಚಂಡಿಕಾಹೋಮ ನಡೆಯಲಿದೆ. 

ಶನಿವಾರ ಬೆಳಿಗ್ಗೆ 11 ಗಂಟೆಗೆ ಏರ್ ಶೋ ಆರಂಭವಾಗಲಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2.15ರ ಶುಭ ಮಕರ ಲಗ್ನದಲ್ಲಿ ಸಿದ್ದರಾಮಯ್ಯ ಅವರು ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಹೊರಡಲಿದೆ. 

ಮಧ್ಯಾಹ್ನ 4.45ರ ಶುಭ ಕುಂಭ ಲಗ್ನದಲ್ಲಿ ಸಿದ್ದರಾಮಯ್ಯ, ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಇತರೆ ಗಣ್ಯರು ದಸರಾ ಗಜಪಡೆ ಸಾರಧಿ ಅರ್ಜುನ ಹೊತ್ತು ತರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ಮೂರ್ತಿಗೆ ಪೂಷ್ಪಾರ್ಚನೆ ಮಾಡುಪ ಮೂಲಕ ವಿಜಯದಶಮಿ ಮೆರವಣಿಗೆ ಚಾಲನೆ ನೀಡಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com