ಬೆಂಗಳೂರು: ಆಭರಣ ಮಳಿಗೆಗಳಲ್ಲಿ ಚಿನ್ನ ಕದಿಯುತ್ತಿದ್ದ ಮಾಜಿ ಟೆಕ್ಕಿ ಬಂಧನ

ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದ ತಮಿಳುನಾಡು ಮೂಲದ ಮಾಜಿ ಟೆಕ್ಕಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದ ತಮಿಳುನಾಡು ಮೂಲದ ಮಾಜಿ ಟೆಕ್ಕಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಪ್ರಭು ಕನಕರತ್ನಂ (34) ಬಂಧಿತ ಆರೋಪಿ, ಈತ ಸದ್ಯ ತನ್ನ ತಾಯಿಯೊಂದಿಗೆ ಯಲಹಂಕ ನ್ಯೂ ಟೌನ್ ನಲ್ಲಿ ವಾಸವಾಗಿದ್ದಾನೆ. ಬಂಧಿತ ಆರೋಪಿಯಿಂದ 2.5 ಲಕ್ಷ ರೂ. ಮೌಲ್ಯದ 85 ಗ್ರಾಂನ 2 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಯನಗರದಲ್ಲಿರುವ ವಿಬಿಜೆ ಆಭರಣ ಅಂಗಡಿಯಲ್ಲಿ  ಜನವರಿ 13 ರಂದು ಕಳ್ಳತನ ನಡೆದಿತ್ತು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ  ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಆತನ ಮನೆಯಲ್ಲಿ ಬಂಧಿಸಿದ್ದಾರೆ.  2017 ರಲ್ಲಿ ಮಲ್ಲೇಶ್ವರಂ ನಲ್ಲಿ ಇಂಥಹುದ್ದೇ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
2007 ರಲ್ಲಿ ಮತ್ತಿಕೆರೆಯಲ್ಲಿರುವ  ಖಾಸಗಿ ಕಾಲೇಜಿನಲ್ಲಿ ಎಂಜಿನೀಯರಿಂಗ್ ಮುಗಿಸಿದ್ದ ಈತ ಕೋರಮಂಗಲದ ಪ್ರಸಿದ್ಧ ಕಂಪನಿಯೊಂದರಲ್ಲಿ ಪ್ರಭು ಕೆಲಸ ಮಾಡುತ್ತಿದ್ದ, ಅದಾದ ನಂತರ ಲಂಡನ್ ವಿವಿ ಯೊಂದರಲ್ಲಿ ಎಂಬಿಎ ಮುಗಿಸಿ ವಾಪಾಸಾಗಿದ್ದ. 
2015 ರಲ್ಲಿ ಭಾರತಕ್ಕೆ ಬಂದ ಈತ  ಪ್ರಸಿದ್ಧ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅನಾರೋಗ್ಯ ಸಮಸ್ಯೆಯಿಂದ ಕೆಲಸ ಬಿಟ್ಟಿದ್ದ ಪ್ರಭು ಕನಕರತ್ನಂ ಸ್ವಂತ ವ್ಯವಹಾರ ಆರಂಭಿಸಿದ್ದ. ನಿರೀಕ್ಷೆಯಂತೆ ಲಾಭ ಬಾರದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿ, ಕಳ್ಳತನಕ್ಕೆ ಕೈ ಹಾಕಿದ್ದ. ಗ್ರಾಹಕನ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ತೆರಳುತ್ತಿದ್ದ ಪ್ರಭು, ಚಿನ್ನಾಭರಣ ಖರೀದಿ ನೆಪದಲ್ಲಿ ಹಲವು ಆಭರಣಗಳನ್ನು ತೆಗೆಸಿ, ಸಿಬ್ಬಂದಿ ಕಣ್ತಪ್ಪಿಸಿ 2.5 ಲಕ್ಷ ಮೌಲ್ಯದ 60 ಗ್ರಾಂ. ತೂಕದ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com