ವೈದ್ಯಕೀಯ, ಡೆಂಟಲ್ ಶಿಕ್ಷಣ ಶುಲ್ಕ ಶೇ.10 ಏರಿಕೆ : ಎಂಜಿನೀಯರಿಂಗ್ ಶುಲ್ಕ ಶೇ.50ರಷ್ಟು ಏರಿಕೆಗೆ ಒತ್ತಾಯ

ರಾಜ್ಯದ ಖಾಸಗಿ ಎಂಜಿನೀಯರ್ ಕಾಲೇಜುಗಳು ಪದವಿ ಪೂರ್ವ ಕೋರ್ಸ್ ಗಳಿಗೆ ಶೇ. 50 ರಷ್ಟು ಶುಲ್ಕ ಏರಿಸಬೇಕೆಂದು ಒತ್ತಾಯಿಸಿವೆ, ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ರಾಜ್ಯದ ಖಾಸಗಿ ಎಂಜಿನೀಯರ್ ಕಾಲೇಜುಗಳು ಪದವಿ ಪೂರ್ವ ಕೋರ್ಸ್ ಗಳಿಗೆ ಶೇ. 50 ರಷ್ಟು ಶುಲ್ಕ ಏರಿಸಬೇಕೆಂದು ಒತ್ತಾಯಿಸಿವೆ, ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶುಲ್ಕರಚನೆ ಸಂಬಂಧ ಚರ್ಚಿಸಲು ಕಾಯುವುದಾಗಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ನಿರ್ಧರಿಸಿದೆ.
ಕಳೆದ ವರ್ಷ ಶುಲ್ಕ ಏರಿಕೆ ಮಾಡದಂತೆ ಸರ್ಕಾರ ನಮ್ಮ ಮನವೊಲಿಸಿತ್ತು, ಈ ಬಾರಿ ರಚನೆಯಾಗುವ ನೂತನ ಸರ್ಕಾರ ಶುಲ್ಕ ಏರಿಕೆಗೆ ಅನುಮತಿ ನೀಡಬೇಕು, ಇಲ್ಲದಿದ್ದರೇ ನಾವು ಒಮ್ಮತದ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಎಂದು ರಾಜ್ಯ ಅನುದಾನ ರಹಿತ ಖಾಸಗಿ ಎಂಜನೀಯರಿಂಗ್ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಎಂ.ಕೆ ಪಾಂಡುರಂಗ ಶೆಟ್ಟಿ ಹೇಳಿದ್ದಾರೆ.
2018 ಮತ್ತು 2019ನೇ ಸಾಲಿನ ಶೈಕ್ಷಣಿಕ ವರ್ಷದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಪೂರ್ವ ಕೋರ್ಸ್ ಗಳಿಗೆ ಶೇ. 10ರಷ್ಟ ಶುಲ್ಕ ಏರಿಕೆಯಾಗಲಿದೆ. 
ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಖೋಟಾದ  ಸೀಟುಗಳಿಗೆ 77 ಸಾವಿರ ಹಾಗೂ ಕಾಮೆಡ್ ಕೆ ಕೋಟಾ ಅಡಿಯಲ್ಲಿ ಬರುವ ಸೀಟುಗಳಿಗೆ 6.32 ಲಕ್ಷ ರು ಪಾವತಿಸಬೇಕಾಗಿದೆ. ಹಾಗೆಯೇ ದಂತ ವೈದ್ಯಕೀಯ ಕೋರ್ಸ್ ಗಳಿಗೆ 49 ಸಾವಿರದಿಂದ 4.29 ಲಕ್ಷ ರುಗೆ ಏರಿಕೆಯಾಗಲಿದೆ.. ಚುನಾವಣೆ ಘೋಷಣೆಯಾಗಿರುವುದರ ಹಿನ್ನೆಲೆಯಲ್ಲಿ ಇನ್ನೂ ಶುಲ್ಕ ರಚನೆ ಬಗ್ಗೆ ಚರ್ಚಿಸಿಲ್ಲ, ಹೊಸ ಸರ್ಕಾರ ರಚನೆಯಾಗಿ ಅಧಿಕಾರಕ್ಕೆ ಬರುವವರೆಗೂ ಚರ್ಚಿಸದಿರಲು ನಿರ್ಧರಿಸಲಾಗಿದೆ.
2017-18ನೇ ಸಾಲಿನಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಶುಲ್ಕ ನಿಗದಿ ಮಾಡುವಾಗ ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ಶೇ, 10 ರಷ್ಚು ಶುಲ್ಕ ಏರಿಕೆ ಮಾಡಲಾಗಿತ್ತು, ಹೀಗಾಗಿ ಕರಾರಿನ ಪ್ರಕಾರ  ಈ ವರ್ಷದಿಂದ ಶೇ.10 ಶುಲ್ಕ ಏರಿಕೆ ಅನ್ವಯವಾಗಲಿದೆ, ಹಾಗೂ 2019 ಮತ್ತು 20ನೇ ಸಾಲಿನಲ್ಲೂ ಶೇ.10 ರಷ್ಟು ಶುಲ್ಕ ಏರಿಕೆಯಾಗಲಿದೆ ಎಂದು ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ,ಆರ ಜಯರಾಮ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com