ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆ ತಾತ್ಕಾಲಿಕ ನಿಷೇಧ: ಬಂಗಡೆ ಮೀನಿನ ಬೆಲೆ ಏರಿಕೆ ಸಾಧ್ಯತೆ

ಜೂನ್ 14ರ ತನಕ ತಳಿಯನ್ನು ಬೆಳೆಸುವ ಉದ್ದೇಶದಿಂದ ಪೂರ್ವ ಕರಾವಳಿಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಜೂನ್ 14ರ ತನಕ ತಳಿಯನ್ನು ಬೆಳೆಸುವ ಉದ್ದೇಶದಿಂದ ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿರುವುದರಿಂದ ಇಲ್ಲಿನ ಸ್ಥಳೀಯ ಬಂಗಡೆ ಮೀನಿನ ಬೆಲೆ ಏರಿಕೆಯಾಗಲಿದೆ ಎಂದು ತಜ್ಞರು ಖಚಿತಪಡಿಸಿದ್ದಾರೆ.

ಕರಾವಳಿಯಲ್ಲಿ ಇದು ಮೀನುಗಾರಿಕೆಯ ಸಮಯವಾಗಿದ್ದು ಸ್ಥಳೀಯ ಮೀನುಗಾರಿಕೆ ನಿಷೇಧದಿಂದಾಗಿ ವಹಿವಾಟು ಇಳಿಮುಖವಾಗಿದೆ. ಮಂಗಳೂರಿನಲ್ಲಿ 3,173 ಮೀನುಗಾರಿಕೆ ದೋಣಿಗಳಲ್ಲಿ ಸುಮಾರು ಶೇಕಡಾ 50ರಷ್ಟನ್ನು ತೀರದಲ್ಲಿಡಲಾಗಿದೆ. ಇದಕ್ಕೆ ಸಮುದ್ರದಲ್ಲಿ ಮೀನುಗಳ ಕೊರತೆಯೇ ಕಾರಣವಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಏಪ್ರಿಲ್-ಮೇ ತಿಂಗಳಲ್ಲಿ ಮೀನುಗಾರಿಕೆ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುಳ.

ಅಲ್ಲದೆ ಹಿಡಿದ ಮೀನುಗಳನ್ನು ಚೆನ್ನೈಗೆ ಕಳುಹಿಸಲಾಗುತ್ತದೆ. ನಿಷೇಧದ ಸಂದರ್ಭದಲ್ಲಿ ಚೆನ್ನೈಗೆ ಹೆಚ್ಚಿನ ಮೀನುಗಳು ಪೂರೈಕೆಯಾಗುವುದು ಕೊಚ್ಚಿ ಮತ್ತು ಮಂಗಳೂರುಗಳಿಂದ. ನಿಷೇಧದಿಂದಾಗಿ ಮಂಗಳೂರಿನಿಂದ ಚೆನೈಗೆ ಪೂರೈಕೆಯಾಗುವ ಮೀನುಗಳಲ್ಲಿ ಪ್ರತಿ ದಿನಕ್ಕೆ 60 ಟನ್ ಗಳಷ್ಟು ಕಡಿಮೆಯಾಗುತ್ತದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಹೇಶ್ ಕುಮಾರ್.

ಸಾಮಾನ್ಯವಾಗಿ ಬೆಂಗಳೂರಿಗೆ ಚೆನ್ನೈಯಿಂದ ಮೀನುಗಳು ಹೆಚ್ಚು ಪೂರೈಕೆಯಾಗುತ್ತವೆ. ಆದರೆ ಈ ಬಾರಿ ಚೆನ್ನೈಯಲ್ಲಿ ಮೀನುಗಳ ಕೊರತೆಯಿರುವುದರಿಂದ ಮಂಗಳೂರಿನಿಂದ ದಿನಕ್ಕೆ 30 ಟನ್ ಗಳಷ್ಟು ಮೀನುಗಳು ಪೂರೈಕೆಯಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com