ಚುನಾವಣಾ ಕಣ ಕರ್ನಾಟಕದಲ್ಲಿ ಫೇಸ್ ಬುಕ್ ನಿಂದ ಸುದ್ದಿಯ ವಾಸ್ತವಾಂಶ ಪರಿಶೀಲಿಸುವ ಪ್ರಕ್ರಿಯೆ!
ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆ ಸಂದರ್ಭದಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಜಾಲತಾಣ ಫೇಸ್ ಬುಕ್ ಕ್ರಮ ಕೈಗೊಂಡಿದೆ.
ನವದೆಹಲಿ: ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆ ಸಂದರ್ಭದಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಜಾಲತಾಣ ಫೇಸ್ ಬುಕ್ ಕ್ರಮ ಕೈಗೊಂಡಿದೆ.
ಇದಕ್ಕಾಗಿ ಫ್ಯಾಕ್ಟ್ ಚೆಕಿಂಗ್(ವಾಸ್ತವಾಂಶವನ್ನು ಪರಿಶೀಲಿಸುವ) ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕಾಗಿ ಫೇಸ್ ಬುಕ್, ಸ್ವಾಯತ್ತ ಡಿಜಿಟಲ್ ಪತ್ರಿಕೋದ್ಯಮ ಸಂಸ್ಥೆಯಾಗಿರುವ BOOM ಸಹಾಯ ಪಡೆದಿದೆ.
ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಫೇಸ್ ಬುಕ್ ಈ ಕ್ರಮ ಕೈಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುವ ಆಂಗ್ಲ ಭಾಷೆಯ ಸುದ್ದಿಗಳ ಬಗ್ಗೆ ಹೆಚ್ಚು ಗಮನ ಹರಿಸಲಿದ್ದು, ಸುಳ್ಳು ಸುದ್ದಿಗಳನ್ನು ಸಾಧ್ಯವಾದಷ್ಟೂ ತಡೆಗಟ್ಟಲಾಗುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ.
ಒಂದು ವೇಳೆ ಫೇಸ್ ಬುಕ್ ಕಣ್ಣಿಗೆ ಸುಳ್ಳು ಸುದ್ದಿಗಳು ಕಂಡರೆ ಅಂತಹ ಸುದ್ದಿಗಳು ಜನರಿಗೆ ತಲುಪುದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೇ ಅಲ್ಲದೇ ಆ ಸುಳ್ಳು ಸುದ್ದಿಯನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ ಪೇಜ್ ಹಾಗೂ ಅದನ್ನು ಹಂಚಿಕೆ ಮಾಡಿದವರಿಗೂ ಸುಳ್ಳು ಸುದ್ದಿಯ ಬಗ್ಗೆ ನೋಟಿಫಿಕೇಷನ್ ಹೋಗುವಂತೆ ಮಾಡಲಾಗುತ್ತದೆ ಎಂದು ಫೇಸ್ ಬುಕ್ ಮಾಹಿತಿ ನೀಡಿದೆ.