ಐಫೋನ್ ಕೊಡಿಸುವಂತೆ ಯುವತಿಗೆ ಬ್ಲ್ಯಾಕ್ ಮೇಲೆ: ಇಬ್ಬರು ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಗಳ ಬಂಧನ

ಪ್ರಿಯತಮೆಯೊಂದಿಗೆ ರಹಸ್ಯವಾಗಿ ಕಳೆದ ಕ್ಷಣಗಳನ್ನು ವಿಡಿಯೋ ಮಾಡಿದ್ದ ಪ್ರಿಯಕರ ಹಾಗೂ ಸಾಮಾಜಿಕ ಜಾಲತಾಣಕ್ಕೆ ಆ ವಿಡಿಯೋ ಹಾಕಿ ಬ್ಯ್ಯಾಕ್ ಮೇಲ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಿಯತಮೆಯೊಂದಿಗೆ ರಹಸ್ಯವಾಗಿ ಕಳೆದ ಕ್ಷಣಗಳನ್ನು ವಿಡಿಯೋ ಮಾಡಿದ್ದ ಪ್ರಿಯಕರ ಹಾಗೂ ಸಾಮಾಜಿಕ ಜಾಲತಾಣಕ್ಕೆ ಆ ವಿಡಿಯೋ ಹಾಕಿ ಬ್ಯ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮುರುಗೇಶಪಾಳ್ಯದ ವಿನಾಯಕ ನಗರದಲ್ಲಿ ನೆಲೆಸಿರುವ ಬಿಹಾರ ಮೂಲದ ಅಭಿಷೇಕ್‌ ಕುಮಾರ್‌ ಝಾ (24) ಹಾಗೂ ಹೊಂಗಸಂದ್ರದಲ್ಲಿ ನೆಲೆಸಿರುವ ಉತ್ತರ ಪ್ರದೇಶದ ಗೌರವ್‌ ಚೌಧರಿ (26) ಬಂಧಿತರು. 
ಆರೋಪಿಗಳ ಬಳಿಯಿಂದ ವಿಡಿಯೊ ರೆಕಾರ್ಡ್‌ ಮಾಡಲು ಬಳಸಿದ್ದ  ಸ್ಪೈ ವಾಚ್‌ ಕ್ಯಾಮೆರಾ, ಲ್ಯಾಪ್‌ಟಾಪ್‌, ಐ ಪ್ಯಾಡ್‌, ಹಾಗೂ ಐದು ಮೊಬೈಲ್‌ ಸೇರಿದಂತೆ ಇನ್ನಿತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಕುಮಾರ್‌ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಗಿರಿನಗರ ಶಾಖೆಯಲ್ಲಿ ಉಪ ವ್ಯವಸ್ಥಾಪಕರಾಗಿ ಹಾಗೂ ಗೌರವ್‌ ಚೌಧರಿ ಬೊಮ್ಮನಹಳ್ಳಿ ಶಾಖೆಯಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರೂ ಸ್ನೇಹಿತರಾಗಿದ್ದರು. ತಿಂಗಳ ಹಿಂದೆ ಅಭಿಷೇಕ್‌ಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿಯೊಬ್ಬಳ ಪರಿಚಯವಾಗಿದ್ದು, ಅವರ ನಡುವೆ ಆತ್ಮೀಯತೆಯಿತ್ತು.
 ಪ್ರೀತಿಯ ನೆಪದಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದ ಅಭಿಷೇಕ್‌ ಖಾಸಗಿ ಕ್ಷಣಗಳನ್ನು ಕಳೆದಿದ್ದ. ಅದನ್ನು ತನ್ನ ಸ್ಪೈ ವಾಚ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ ಅಭಿಷೇಕ್‌, ತನ್ನ ಮೊಬೈಲ್‌ಫೋನ್‌ಗೆ ಲೋಡ್‌ ಮಾಡಿಕೊಂಡಿದ್ದ. ಬಳಿಕ ಅಭಿಷೇಕ್‌ನ ಮೊಬೈಲ್‌ಫೋನ್‌ ಪಡೆದುಕೊಂಡ ಗೌರವ್‌, ಆ ಫೋನ್‌ನಲ್ಲಿದ್ದ ಖಾಸಗಿ ವಿಡಿಯೋವನ್ನು ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಿದ್ದ. 
ವಿಡಿಯೋದ ಸ್ಕ್ರೀನ್‌ ಶಾಟ್‌ ತೆಗೆದು ಏ.4ರಂದು ಯುವತಿಯ ಇನ್‌ಸ್ಟಾಗ್ರಾಂಗೆ ಕಳುಹಿಸಿದ್ದ. ಐ ಫೋನ್‌ 10 ಫೋನ್‌ ಕೊಡಿಸಬೇಕು. ಇಲ್ಲದಿದ್ದರೆ ಸಂಪೂರ್ಣ ವಿಡಿಯೋವನ್ನು ಜಾಲತಾಣಕ್ಕೆ ಹಾಕುತ್ತೇನೆ. ಅಲ್ಲದೆ ನಿನ್ನ ಕುಟುಂಬದ ಸದಸ್ಯರಿಗೆ ಕಳುಹಿಸಿ ಮಾನಹಾನಿ ಮಾಡುತ್ತೇನೆ,' ಎಂದು ಈ ವೇಳೆ ಬೆದರಿಕೆ ಹಾಕಿದ್ದ. 
ನೊಂದ ಯುವತಿ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ನೀಡಿದ ಮಾಹಿತಿ ಆಧಾರದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com