2013 ವಿಧಾನಸಭಾ ಚುನಾವಣೆ: ಶಾಸಕ ಜಿ ಮಂಜುನಾಥ್ ಸ್ಪರ್ಧೆ ಅಸಿಂಧು, ಹೈಕೋರ್ಟ್ ತೀರ್ಪು

2013 ರ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಮೀಸಲಾತಿ ಕ್ಷೇತ್ರ (ಎಸ್ಸಿ) ಶಾಸಕ ಜಿ ಮಂಜುನಾಥ್ ಸ್ಪರ್ಧೆಯನ್ನು ಕರ್ನಾಟಕ ಹೈಕೋರ್ಟ್ ಅಮಾನ್ಯ ಮಾಡಿದೆ.
2013 ವಿಧಾನಸಭಾ ಚುನಾವಣೆ: ಶಾಸಕ ಜಿ ಮಂಜುನಾಥ್ ಸ್ಪರ್ಧೆ ಅಸಿಂಧು,  ಹೈಕೋರ್ಟ್ ತೀರ್ಪು
2013 ವಿಧಾನಸಭಾ ಚುನಾವಣೆ: ಶಾಸಕ ಜಿ ಮಂಜುನಾಥ್ ಸ್ಪರ್ಧೆ ಅಸಿಂಧು, ಹೈಕೋರ್ಟ್ ತೀರ್ಪು
ಬೆಂಗಳೂರು:  2013 ರ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಮೀಸಲಾತಿ ಕ್ಷೇತ್ರ (ಎಸ್ಸಿ) ಶಾಸಕ ಜಿ ಮಂಜುನಾಥ್ ಸ್ಪರ್ಧೆಯನ್ನು ಕರ್ನಾಟಕ ಹೈಕೋರ್ಟ್ ಅಮಾನ್ಯ ಮಾಡಿದೆ.
ಮಂಜುನಾಥ್ 'ಬೈರಾಗಿ' ಜಾತಿಗೆ (ಒಬಿಸಿ) ಸೇರಿದ ಕಾರಣ ಅವರನ್ನು ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಅಕ್ರಮ. ಮೀಸಲು (ಎಸ್ಸಿ) ಕ್ಷೇತ್ರದ ಅಭ್ಯರ್ಥಿಯಾಗಿ ಮಂಜುನಾಥ್ ನಾಮನಿರ್ದೇಶನವನ್ನು ಸ್ವೀಕರಿಸಬಾರದೆಂದು ಜೆಡಿಎಸ್ ನ ಮುನಿ ಅಂಜನಪ್ಪ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಇದಾಗ್ಯೂ ಮಂಜುನಾಥ್ ನಾಮ ಪತ್ರ ಸಲ್ಲಿಸುವ ಸಮಯದಲ್ಲಿ ಜಾತಿ ಪ್ರಮಾಣಪತ್ರದ ಮಹಜರು ನೀಡುವಾಗ ಸುಪ್ರೀಂ ಕೋರ್ಟ್ ನೀಡಿದ ಮಾರ್ಗದರ್ಶನಗಳು ಅನುಸರಿಸಿಲ್ಲ ಎನ್ನಲಾಗಿದೆ . ಈ ಕಾರಣಕ್ಕಾಗಿ ನ್ಯಾಯಾಲಯವು ಮಂಜುನಾಥ್ ಅವರಿಗೆ  25,000 ರೂ ವೆಚ್ಚವನ್ನು ಭರಿಸುವಂತೆ ಆದೇಶಿಸಿದೆ.
ಮೇ 5, 2013 ರಂದು ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಂಜುನಾಥ್ ಅವರು 73,146 ಮತಗಳನ್ನು ಪಡೆದು ಜಯ ಗಳಿಸಿದ್ದರೆ ಅವರ ನಿಕಟ ಪ್ರತಿಸ್ಪರ್ಧಿ ಮುನಿ ಆಂಜನಪ್ಪ ಅವರು 39,142 ಮತಗಳನ್ನು ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com