ರಾಜಕೀಯ ಸಭೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ವಿವಿಯ ಇಬ್ಬರು ಪ್ರೊಫೆಸರ್ ಅಮಾನತು

ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇರೆಗೆ ಮೈಸೂರು ವಿಶ್ವವಿದ್ಯಾಲಯದ ಇಬ್ಬರು ಪ್ರೊಫೆಸರ್ ಗಳನ್ನು ಅಮಾನತ್ತು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ  ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇರೆಗೆ   ಮೈಸೂರು ವಿಶ್ವವಿದ್ಯಾಲಯದ ಇಬ್ಬರು ಪ್ರೊಫೆಸರ್ ಗಳನ್ನು ಅಮಾನತ್ತು ಮಾಡಲಾಗಿದೆ.

 ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಪಿ. ಮಹೇಶ್ಚಂದ್ರ ಗುರು  ಹಾಗೂ  ಕುವೆಂಪು  ಕನ್ನಡ ಅಧ್ಯಯನ ಸಂಸ್ಥೆಯ ಪ್ರೋಫೆಸರ್  ಅರವಿಂದ ಮಾಲಗತ್ತಿ  ಸೇವೆಯಿಂಂದ ಅಮಾನತ್ತುಗೊಂಡವರು.

ಉಪ ಆಯುಕ್ತರ ದೂರಿನ ಆಧಾರದ ಮೇಲೆ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.  ಆ ಸಭೆಯಲ್ಲಿ ಯಾವುದೇ ರೀತಿಯ ಭಾಷಣ ಮಾಡಲಿಲ್ಲ, ಮಾಧ್ಯಮಗಳು ಮಾಡಿರುವ ವರದಿಗಳು ನಿರಾಧಾರವಾದದ್ದು ಎಂದು ಅಮಾನತ್ತುಗೊಂಡಿರುವ ಪ್ರೋಫೆಸರ್ ಗಳು ಹೇಳಿದ್ದಾರೆ.

 ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯತೀಂದ್ರ ಅವರೊಂದಿಗೆ ವೇದಿಕೆ ಹಂಚಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿರುವಂತೆ ಹೇಳಿಕೆ ನೀಡಿರುವ ಬಗ್ಗೆ  ಬಗ್ಗೆ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ  ವರದಿಯಿಂದ ಕಂಡುಹಿಡಿಯಲಾಗಿದೆ.  

ಚುನಾವಣೆ ನಂತರ ಸಿಂಡಿಕೇಟ್ ಸಭೆಯಲ್ಲಿ ಅಮಾನತ್ತುಗೊಂಡಿರುವ ಪ್ರೋಫೆಸರ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.  ಮಹೇಶ್ಚಂದ್ರ ಗುರು ಅಮಾನತು ಹಿನ್ನೆಲೆಯಲ್ಲಿ ಸಹಾಯಕ ಪ್ರೋಫೆಸರ್ ಪುಟ್ಟಸ್ವಾಮಿ ಅವರನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com