ಚುನಾವಣೆ ಎಫೆಕ್ಟ್; ಜಾನಪದ ಕಲಾವಿದರಿಗೆ ಹೆಚ್ಚಿದ ಬೇಡಿಕೆ

ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳು ಶತಪ್ರಯತ್ನಗಳನ್ನು ಮಾಡುತ್ತಿರುವ ನಡುವಲ್ಲೇ ರಾಜ್ಯದ ಜಾನಪದ ಕಲಾವಿದರ ಬೇಡಿಕೆಗಳು ಹೆಚ್ಚಾಗತೊಡಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಾಗಲಕೋಟೆ: ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಜನರನ್ನು ಸೆಳೆಯಲು
ರಾಜಕೀಯ ಪಕ್ಷಗಳು ಶತಪ್ರಯತ್ನಗಳನ್ನು ಮಾಡುತ್ತಿರುವ ನಡುವಲ್ಲೇ ರಾಜ್ಯದ ಜಾನಪದ ಕಲಾವಿದರ ಬೇಡಿಕೆಗಳು ಹೆಚ್ಚಾಗತೊಡಗಿದೆ. 
ಜಾನಪದ ಕಲಾವಿದರು ರಸ್ತೆಗೆ ಬರುತ್ತಿದ್ದಂತೆಯೇ ಅವರ ನೃತ್ಯಕ್ಕೆ ಜನರು ಮಾರು ಹೋಗುತ್ತಾರೆ. ಎಲ್ಲಿ ಜಾನಪದ ಕಲಾವಿದರು ನೆರೆಯುತ್ತಾರೆಯೋ ಅಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಹೀಗಾಗಿ ಜನರನ್ನು ಆಕರ್ಷಿಸುವ ಸಲುವಾಗಿ ರಾಜಕೀಯ ಪಕ್ಷಗಳು ಜಾನಪದ ಕಲಾವಿದರನ್ನು ಬುಕ್ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. 
ಇದರಂತೆ ಜಾನಪದ ಕಲಾವಿದರಿಗೆ ಬೇಡಿಕೆಗಳು ಹೆಚ್ಚಾಗಿದ್ದು, ದಿನಕ್ಕೆ ರೂ.200 ಹಾಗೂ 300 ಪಡೆದು ಬೆವರು ಸುರಿಸುತ್ತಿದ್ದ ಕಲಾವಿದರು ಇಂದು ದಿನಕ್ಕೆ ರೂ.1000 ಪಡೆಯುತ್ತಿದ್ದಾರೆ. 
ರಾಜಕೀಯ ಪಕ್ಷಗಳು ಎಲ್ಲಿಯೇ ರ್ಯಾಲಿ, ರೋಡ್ ಶೋಗಳನ್ನು ನಡೆಸಿದರೂ ಅಲ್ಲಿ ಜಾನಪದ ಕಲಾವಿದರ ನೃತ್ಯಗಳನ್ನು ಆಯೋಜಿಸಲಾಗುತ್ತಿದೆ. 
ಕರಾವಳಿ, ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂದು ಜಾನಪದ ನೃತ್ಯವನ್ನು ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ಇದರಲ್ಲಿ ಡೊಳ್ಳು ಕುಣಿತ, ಸಮಾನ ಕುಣಿತ, ಕರಡಿ ಮರ್ಜಲ್ ಮತ್ತು ಕಂಸಾಳೆ ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. 
ರೊನ್ ತಾಲೂಕಿನ ನಿವಾಸಿಯಾಗಿರುವ ಅಮರಪ್ಪ ಭಾವಿ ಅವರು ಡೊಳ್ಳು ಕುಣಿತ ಕಲಾವಿದರಾಗಿದ್ದಾರೆ. ನೃತ್ಯ ಕುರಿತಂತೆ ಮಾತನಾಡಿರುವ ಅವರು, ಡೊಳ್ಳು ಕುಣಿತವನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಮಾಡುತ್ತಿದ್ದೇನೆ. ಗ್ರಾಮದಲ್ಲಿ ಹಬ್ಬ, ಮಹೋತ್ಸವ, ದೀಪಾವಳಿ, ಯುಗಾದಿ ಹಬ್ಬಗಳು ಬಂದಾಗ ನಮ್ಮ ತಾತಂದಿರು ಮಾಡುತ್ತಿದ್ದರು. ನೃತ್ಯಕ್ಕೆ ಪ್ರತಿಯಾಗಿ ಗ್ರಾಮದ ಮುಖ್ಯಸ್ಥರು ನಮಗೆ ವೇತನವೆಂಬಂತೆ ಗೋದಿಯನ್ನು ನೀಡುತ್ತಿದ್ದರು. ಸರ್ಕಾರದ ವತಿಯಿಂದ ಯಾವುದಾದರೂ ಕಾರ್ಯಗಳು ಆಯೋಜಿಸಿದರೆ ಅಲ್ಲಿ ನೃತ್ಯ ಪ್ರದರ್ಶಿಸಿದ ಸಂದರ್ಭದಲ್ಲಿ ನಮಗೆ ಹಣವನ್ನು ನೀಡುತ್ತಾರೆ. ರೋಡ್ ಶೋ ಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ನಮ್ಮೊಂದಿಗೆ ಕುಣಿಯುತ್ತಾರೆ ಎಂದು ಹೇಳಿದ್ದಾರೆ. 
ಡೊಳ್ಳು ಕುಣಿತ ಹಾಗೂ ಕಂಸಾಳೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಕೂಡ ಭಾಗಿಯಾಗುತ್ತಿದ್ದಾರೆ. ಚುನಾವಣೆ ಬಂದಾಗ ರೈತರಿಗೆ ಉತ್ತಮ ಸಮಯವಾಗಿರುತ್ತದೆ. ಪ್ರಮುಖವಾಗಿ ಮಳೆ ಬಾರದೆ ಹೋದಂತಹ ಸಂದರ್ಭದಲ್ಲಿ. ಚುನಾವಣೆ ಸಂದರ್ಭದಲ್ಲಿ ನಮಗೂ ಹೆಚ್ಚಿನ ಲಾಭವಾಗುತ್ತದೆ. ಊಟ ವಸತಿಗಳೊಂದಿಗೆ ಕೈ ತುಂಬ ಹಣ ಕೂಡ ಸಿಗುತ್ತದೆ. ಇಂತಹ ಕಾರ್ಯಕ್ರಮಗಳಿಂದ ಜಾನಪದ ಕಲೆಗಳು ಜೀವಂತವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. 
ವೀರೇಶ್ ಕೊಕನ್ಕೊಪ್ಪ ಎಂಬುವವರು ಮಾತನಾಡಿ, ಚುನಾವಣೆ ಹತ್ತಿರ ಬಂದಾಗ ಅದೃಷ್ಟ ನಮ್ಮ ಮನೆ ಬಾಗಿಲನ್ನು ತಟ್ಟುತ್ತದೆ. ಆದರೆ, ನಾನು ಉತ್ಸಾಹದಿಂದಲೇ ನೃತ್ಯವನ್ನು ಮಾಡುತ್ತೇನೆ. ದಿನದ ಆಧಾರದ ಮೇಲೆ ನಮಗೆ ಹಣವನ್ನು ನೀಡಲಾಗುತ್ತದೆ. ಕಳೆದ 2 ವಾರಗಳಿಂದ ನಮ್ಮ ತಂಡಗಳು ಉತ್ತರ ಕರ್ನಾಟಕದ ಹಲವು ನಗರಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದೆ. ದಸರಾ ಹಬ್ಬದಲ್ಲಿಯೂ ಪ್ರದರ್ಶನಗಳನ್ನು ನೀಡಿತ್ತು. ನಮ್ಮನ್ನು ನಾವು ಕಾರ್ಯಮಗ್ನರಾಗಿ ಮಾಡಿಕೊಳ್ಳಲು ಇದು ಉತ್ತಮವಾದ ಹಾದಿಯಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com