ಚಿಕ್ಕಮಗಳೂರು: 14.28 ಲಕ್ಷ ಮೌಲ್ಯದ ಸೀರೆಗಳ ವಶ

ಪೋಲೀಸರು ಹಾಗೂ ಚುನಾವಣಾಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 14.28 ಲಕ್ಷ ರೂ. ಮೌಇಲ್ಯದ 90 ಬಂಡಲ್‌ ಸೀರೆಗಳನ್ನು ವಶಪಡಿಸಿಕೊಳ್ಳಲಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು: 14.28 ಲಕ್ಷ ಮೌಲ್ಯದ ಸೀರೆಗಳ ವಶ
ಚಿಕ್ಕಮಗಳೂರು: 14.28 ಲಕ್ಷ ಮೌಲ್ಯದ ಸೀರೆಗಳ ವಶ
Updated on
ಚಿಕ್ಕಮಗಳೂರು: ಪೋಲೀಸರು ಹಾಗೂ ಚುನಾವಣಾಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 14.28 ಲಕ್ಷ ರೂ. ಮೌಇಲ್ಯದ 90 ಬಂಡಲ್‌ ಸೀರೆಗಳನ್ನು ವಶಪಡಿಸಿಕೊಳ್ಳಲಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸೂರತ್ ನಿಂದ ವಿಆರ್‌ಎಲ್ ಲಾಗಿಸ್ಟಿಕ್ಸ್‌ನಲ್ಲಿಚಿಕ್ಕಮಗಳೂರಿನ ವರ್ಧಮಾನ್ ಸಿಲ್ಕ್‌ ಕೇಂದ್ರಕ್ಕೆ ತರಲಾಗುತ್ತಿದ್ದ  50 ಸಾವಿರಕ್ಕೂ ಅಧಿಕ ಸಂಖ್ಯೆಯ ಸೀರೆಗಳನ್ನು ಪೋಲೀಸರು ವಶಕ್ಕೆ ಪಡೆಇದ್ದಾರೆ.
ಮತದಾರರಿಗೆ ಹಂಚುವ ಸಲುವಾಗಿ ರಾಜಕೀಯ ಪಕ್ಷದ ಮುಖಂಡರು ಸೂರತ್ ನಿಂದ ಸೀರೆಗಳನ್ನು ತರಿಸಿಕೊಳ್ಳುತ್ತಿದ್ದರೆಂದು ಆರೋಪ ಕೇಳಿಬಂದಿದ್ದು ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.
ಇದೇ ವೇಳೆ ಇವೆಲ್ಲಾ ಬಿಜೆಪಿ ಪಕ್ಷಕ್ಕೆ ಸೇರಿದ ಸೀರೆಗಳೆಂದು ಆರೋಪಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com