96 ಕೋಟಿ ಆದಾಯ ಹೊಂದಿರುವ ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ!

ವಾರ್ಷಿಕ 96 ಕೋಟಿ ಆದಾಯ ಹೊಂದಿರುವ ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯ ರಾಜ್ಯದ ಶ್ರೀಮಂತ ಮುಜರಾಯಿ ದೇವಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಕಳೆದ ವರ್ಷದಲ್ಲಿ ದೇವಾಲಯದ ವಾರ್ಷಿಕ ಆದಾಯ 89 ಕೋಟಿಯಷ್ಟಿತ್ತು. ಭಕ್ತಾದಿಗಳು ನೆರವೇರಿಸುವ ವಿವಿಧ ಸೇವೆಗಳಿಂದ ಆದಾಯ ಹೆಚ್ಚು ಬರುತ್ತಿದ್ದು, ಕೇವಲ ವಿವಿಧ ಸೇವೆಗಳಿಂದಲೇ 40.5 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ದೇವಾಲಯದ ಅಧಿಕಾರಿ ರವೀಂದ್ರ ಹೇಳಿದ್ದಾರೆ. 
ಇನ್ನು ಹುಡಿ ಆದಾಯದ ಎರಡನೇ ಮೂಲವಾಗಿದ್ದು, 20.5 ಕೋಟಿಯಷ್ಟು ಹಣ ಹುಂಡಿಯಿಂದ ಸಂಗ್ರಹವಾಗಿದೆ.  ಇದರ ಹೊರತಾಗಿ 19.4 ಕೋಟಿ ರೂಪಾಯಿ ಬ್ಯಾಂಕ್ ಬಡ್ದಿಯಿಂದ ಬರುತ್ತಿದೆ, ಕೃಷಿಯಿಂದ 14.7 ಕೋಟಿ ಅದಾಯ, ಬಾಡಿಗೆಯಿಂದ 2.5 ಕೋಟಿ ಆದಾಯ, ಸಮಾರಂಭಗಳಿಗಾಗಿ ಭವನಗಳ ಬಾಡಿಗೆಯಿಂದ 2.8, ಅರ್ಪಣೆಯಿಂದ 2.1 ಕೋಟಿ ರೂಪಾಯಿ ಇತರ ಮೂಲಗಳಿಂದ 7.9 ಕೋಟಿ ರೂಪಾಯಿ ಆದಾಯ ಬರುತ್ತಿದೆ. 
ನಿಷೇಧಗೊಂಡಿರುವ ನೋಟುಗಳನ್ನೂ ಸಹ ಹುಂಡಿಗೆ ಹಾಕಲಾಗುತ್ತಿದ್ದು, ಅಮೆರಿಕ ಡಾಲರ್ ರೂಪದಲ್ಲಿಯೂ ಹುಂಡಿಗೆ ಹಣ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com