ಹೈಕೋರ್ಟ್ ತರಾಟೆ ನಂತರ ನಿದ್ದೆಯಿಂದೆದ್ದ ಬಿಬಿಎಂಪಿ: 5 ಸಾವಿರ ಅನಧಿಕೃತ ಫ್ಲೆಕ್ಸ್ ತೆರವು!

ಹೈಕೋರ್ಟ್‌ ಸೂಚನೆಗೆ ನಿದ್ದೆಯಿಂದ ಎದ್ದಿರುವ ಪಾಲಿಕೆ, ಮಧ್ಯಾಹ್ನ 2.30ರ ವೇಳೆಗೆ ಐದು ಸಾವಿರ ಅನಧಿಕೃತ ಫ್ಲೆಕ್ಸ್‌ಗಳನ್ನು ತೆಗೆದಿದೆ ಎಂದು ಹೈಕೋರ್ಟ್‌ಗೆ ...
ಹೈಕೋರ್ಟ್ ನಿರ್ದೇಶನದಂತೆ ಫ್ಲೆಕ್ಸ್ ತೆರವು
ಹೈಕೋರ್ಟ್ ನಿರ್ದೇಶನದಂತೆ ಫ್ಲೆಕ್ಸ್ ತೆರವು
ಬೆಂಗಳೂರು: ಹೈಕೋರ್ಟ್‌ ಸೂಚನೆಗೆ ನಿದ್ದೆಯಿಂದ ಎದ್ದಿರುವ ಪಾಲಿಕೆ, ಮಧ್ಯಾಹ್ನ 2.30ರ ವೇಳೆಗೆ ಐದು ಸಾವಿರ ಅನಧಿಕೃತ ಫ್ಲೆಕ್ಸ್‌ಗಳನ್ನು ತೆಗೆದಿದೆ ಎಂದು ಹೈಕೋರ್ಟ್‌ಗೆ ವರದಿ ನೀಡಿದೆ. 
ಬೆಂಗಳೂರು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿರುವ ಅನಧಿಕೃತ ಫ್ಲೆಕ್ಸ್ ಹಾಗೂ ಬಂಟಿಂಗ್ಸ್ ಗಳನ್ನು ವಿಚಾರಣೆ ಆರಂಭವಾಗುವುದರೊಳಗೆ ತೆರವುಗೊಳಿಸಬೇಕು ಎಂಬ ಹೈಕೋರ್ಟ್ ಸೂಚನೆ ಮೇರೆಗೆ ನಿನ್ನೆ ಮಧ್ಯಾಹ್ನ, 2.30 ರವೇಳೆಗೆ ಸುಮಾರು 5 ಸಾವಿರ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ.
ಈ ಸಂಬಂಧ ಹೈಕೋರ್ಟ್‌ಗೆ ಪಾಲಿಕೆ ವಕೀಲ ವಿ. ಶ್ರೀನಿಧಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಫ್ಲೆಕ್ಸ್ ತೆರವು ಕಾರ್ಯದ ವಿಡಿಯೋಗ್ರಾಫ್ ಮಾಡಿ ಕೋರ್ಟ್‌ಗೆ ಸಲ್ಲಿಸಲು ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ ಪ್ರತಿ ಬಾರಿ ಫ್ಲೆಕ್ಸ್‌ ವಿಚಾರದಲ್ಲಿ ಎಡವದೆ, ಬ್ಯಾನರ್‌ ಹಾವಳಿಗಳನ್ನ ನಿಯಂತ್ರಿಸಿ, ನಿಗಾ ವಹಿಸಲು, ವಿಶೇಷ ಯೋಜನಾ ಕಾರ್ಯ ಪಡೆ ರಚಿಸುವಂತೆ ಸೂಚನೆ ನೀಡಿ, ಆ.8ಕ್ಕೆ ವಿಚಾರಣೆಯನ್ನು ಮುಂದೂಡಿದೆ. 
ಹೈಕೋರ್ಟ್ ನಿರ್ದೇಶನ ನೀಡುವವರೆಗೂ ತೆರೆವುಗೊಳಿಸಬಾರದು ಎಂದು ಬಿಬಿಎಂಪಿ ನಿರ್ದರಿಸಿದೆಯೇ?  ಇದಕ್ಕೂ ಮುಂಚೆ ಏಕೆ ನೀವು ತೆರವುಗೊಳಿಸಲಿಲ್ಲ, ಬೆಂಗಳೂರಿನ ಗತವೈಭಮ ಮರುಕಳಿಸಲು ನಿಮಗೆ ಎಷ್ಟು ಸಮಯ ಬೇಕು ಎಂದು ನನಗೆ ತಿಳಿಸಿ, ಪ್ರತಿಯೊಂದು ವಿಷಯಕ್ಕೂ ಸಾರ್ವಜನಿಕರು ಪಿಐಎಲ್ ಸಲ್ಲಿಸಬೇಕೆ ಎಂದು ಗರಂ ಆಗಿ ಪ್ರಶ್ನಿಸಿದೆ.
ಇನ್ನೂ ಅನಧಿಕೃತ ಫ್ಲೆಕ್ಸ್ ಹಾಕುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಲಾಗಿದೆ. ಈ ಸಂಬಂಧ ಅನಧಿಕೃತ ಫ್ಲೆಕ್ಸ್ ಹಾಕುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇನ್ನೂ ಈ ಸಂಬಧ ವಿವಿಧ ಪಕ್ಷದ ರಾಜಕೀಯ ನಾಯಕರುಗಳಿಗೆ ಪತ್ರ ಬರೆದು ಫ್ಲೆಕ್ಸ್ ಗಳನ್ನು ಹಾಕದಂತೆ ತಿಳಿಸವು ಯೋಚಿಸುತ್ತಿರುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಹೈಕೋರ್ಟ್ ನಿರ್ದೇಶನ ನೀಡಿರುವ ಪ್ರತಿಯನ್ನು ಈ ಪತ್ರದ ಜೊತೆ ಲಗತ್ತಿಸಲು ಉದ್ದೇಶಿಸಿಲಾಗಿದೆ, ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com