ಬೆಂಗಳೂರು: ಕುಖ್ಯಾತ ರೌಡಿ ಕುಣಿಗಲ್ ಗಿರಿ ಬಂಧನ

ನಟೋರಿಯಸ್ ರೌಡಿ ಕುಣಿಗಲ್‌ ಗಿರಿ ಅಲಿಯಾಸ್ ರಾಬರಿ ಗಿರಿ ಈಗ ಮತ್ತೊಮ್ಮೆ ಪೊಲೀಸ್​ ಅತಿಥಿಯಾಗಿದ್ದಾನೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಟೋರಿಯಸ್ ರೌಡಿ ಕುಣಿಗಲ್‌ ಗಿರಿ ಅಲಿಯಾಸ್ ರಾಬರಿ ಗಿರಿ ಈಗ ಮತ್ತೊಮ್ಮೆ ಪೊಲೀಸ್​ ಅತಿಥಿಯಾಗಿದ್ದಾನೆ. 
ಪೀಣ್ಯ ಬಳಿ ದರೋಡೆಯೊಂದಕ್ಕೆ ಸೂಚಿಸಿದ್ದ ಗಿರಿ ಌಂಡ್ ಟೀಮ್ ಅನ್ನ ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ಎಚ್.ವಿ ಅಲಿಯಾಸ್ ಗಿರಿ, ಶ್ರೀನಿವಾಸ್ ಅಲಿಯಾಸ್ ವಾಸು, ಹಾಗೂ ವಿನೋದ್ ಎಚ್ ವಿ ಬಂಧಿತ ಆರೋಪಿಗಳು. ಆರೋಪಿಗಳನ್ನು  ಪೀಣ್ಯದಲ್ಲಿ ಬಂಧಿಸಿದ್ದಾರೆ.
ಹಲವೆಡೆ ದರೋಡೆ, ದಾಂಧಲೆ, ಸುಲಿಗೆ , ಕೊಲೆ ಯತ್ನ ಪ್ರಕರಣದಲ್ಲಿ ನಟೋರಿಯಸ್‌ ಕುಣಿಗಲ್‌ ರವಿ ಭಾಗಿಯಾಗಿದ್ದ. 
ಕುಣಿಗಲ್ ‌ಗಿರಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮೋದೂರು ಗ್ರಾಮದವನು. ಈತನಿಗೆ ತಂದೆ, ತಾಯಿ, ಓರ್ವ ತಮ್ಮನಿದ್ದಾನೆ. ತಂದೆ ಗ್ರಾಮದ ಶನಿಮಹಾತ್ಮ ದೇಗುಲದ ಅರ್ಚಕರಾಗಿ ಕೆಲಸ ಮಾಡ್ತಿದ್ದಾರೆ.
ದರೋಡೆ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡ ಈತ ಬೆಂಗಳೂರು ಹಾಗೂ ಸುತ್ತಮುತ್ತ ಹೆದ್ದಾರಿಗಳಲ್ಲಿ, ನಿರ್ಜನ‌ ಪ್ರದೇಶದಲ್ಲಿ ವಾಹನಗಳನ್ನ ಅಡ್ಡಗಟ್ಟಿ ಲೂಟಿ ಮಾಡಲು ಆರಂಭಿಸಿದ. ಬರೀ ದರೋಡೆ ಪ್ರಕರಣಗಳಲ್ಲಿ ತೊಡಗುತ್ತಿದ್ದ ಈತನಿಗೆ ರಾಬರಿ ಗಿರಿ ಎಂಬ ಅಡ್ಡ ಹೆಸರು ಬಂತು. 
ತನ್ನ ಹೆಸರು ಎಲ್ಲರಿಗೂ ತಿಳಿಯಬೇಕು ಎಂಬುದೇ ಬಯಕೆಯಿಂದ  ಪಬ್ಲಿಸಿಟಿಗಾಗಿ ಈ ಕೆಲಸ ಆರಂಭಿಸಿದ, ಆದರೆ ನಂತರ ಅದೇ ಅವನ ಕಾಯಕವಾಯ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com