ಆರೋಗ್ಯ ಕರ್ನಾಟಕ ಯೋಜನೆ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ

ಆರೋಗ್ಯ ಕರ್ನಾಟಕ ಫ್ಲಾಗ್ ಶಿಪ್ ಯೋಜನೆಯಡಿ ನೀಡುವ ವಿಮೆಯನ್ನು 1.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆರೋಗ್ಯ ಕರ್ನಾಟಕ ಫ್ಲಾಗ್ ಶಿಪ್ ಯೋಜನೆಯಡಿ ನೀಡುವ ವಿಮೆಯನ್ನು 1.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗೆ ಸಮನಾಗಿ ನೀಡಲು ಕರ್ನಾಟಕ ಸರ್ಕಾರ ಚಿಂತಿಸುತ್ತಿದೆ.

ಆಯುಷ್ಮಾನ್ ಭಾರತ್ 62 ಲಕ್ಷ ಬಿಪಿಎಲ್ ಕುಟುಂಬಗಳನ್ನು ಒಳಗೊಂಡರೆ ಆರೋಗ್ಯ ಕರ್ನಾಟಕ ಇಡೀ ರಾಜ್ಯದ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳನ್ನು ಒಳಗೊಂಡಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿ ಸುಮಾರು 1.43 ಕೋಟಿ ಕುಟುಂಬಗಳನ್ನು ಒಳಗೊಂಡಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್, ನಾವು ಪರಿಶೀಲನೆ ಸಭೆ ನಡೆಸಿದ್ದು ಆರೋಗ್ಯ ಕರ್ನಾಟಕ ಯೋಜನೆಯಡಿ 5 ಲಕ್ಷದವರೆಗೆ ರೋಗಿಗಳಿಗೆ ಹಣ ನೀಡಲು ಸರ್ಕಾರ ಚಿಂತಿಸುತ್ತಿದೆ. ಇದಕ್ಕೆ ಸಂಪುಟದ ಒಪ್ಪಿಗೆ ಪಡೆಯಬೇಕಾಗಿದೆ ಎಂದರು.

ಆಯುಷ್ಮಾನ್ ಭಾರತ್ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಡೆಸುತ್ತಿದ್ದು ಅದು ರಾಜ್ಯದಲ್ಲಿ ಆರೋಗ್ಯ ಕರ್ನಾಟಕವನ್ನು ನಡೆಸುತ್ತಿದೆ. ಆರೋಗ್ಯ ಕರ್ನಾಟಕದಡಿ ಸುಮಾರು 15,643 ಜನರು ಪ್ರಸ್ತುತ ಸೇವೆ ಪಡೆದುಕೊಂಡಿದ್ದಾರೆ.

ಆರೋಗ್ಯ ಕರ್ನಾಟಕದಿಂದ ವರ್ಷಕ್ಕೆ ಸುಮಾರು 1,011 ಕೋಟಿ ರೂಪಾಯಿ ವೆಚ್ಚವಾಗುತ್ತದೆ. 501 ಖಾಸಗಿ ಆಸ್ಪತ್ರೆಗಳು ಆರೋಗ್ಯ ಕರ್ನಾಟಕ ಯೋಜನೆಯನ್ನು ಹೊಂದಿವೆ. ಬೆಂಗಳೂರಿನಲ್ಲಿ 47 ಖಾಸಗಿ ಆಸ್ಪತ್ರೆಗಳು ಆರೋಗ್ಯ ಕರ್ನಾಟಕ ಯೋಜನೆಯಡಿ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com