ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯ

ರಾಜ್ಯ ಸರ್ಕಾರ ಕರ್ನಾಟಕ ಸಾರ್ವಜನಿಕ ಸುರಕ್ಷತೆ(ಕ್ರಮಗಳು) ಜಾರಿ ನಿಯಮವನ್ನು ಎಲ್ಲಾ ವಾಣಿಜ್ಯ ...
ಸಿಸಿಟಿವಿ ಕ್ಯಾಮರಾ
ಸಿಸಿಟಿವಿ ಕ್ಯಾಮರಾ

ಬೆಂಗಳೂರು: ಇಲ್ಲಿಯವರೆಗೆ ಪ್ರಮುಖ ಸ್ಥಳಗಳು, ಕಂಪೆನಿಗಳು, ದೇವಾಲಯಗಳು, ವಾಣಿಜ್ಯ ಮಳಿಗೆಗಳು, ಸರ್ಕಾರಿ ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯವಿರುತ್ತಿತ್ತು. ಆದರೆ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರ ಕರ್ನಾಟಕ ಸಾರ್ವಜನಿಕ ಸುರಕ್ಷತೆ(ಕ್ರಮಗಳು) ಜಾರಿ ನಿಯಮವನ್ನು ಎಲ್ಲಾ ವಾಣಿಜ್ಯ ಮಳಿಗೆಗಳು, ಧಾರ್ಮಿಕ ಸ್ಥಳಗಳಲ್ಲಿ ಜಾರಿಗೆ ತಂದಿದ್ದು ಇನ್ನು ಮುಂದೆ ಸಾರ್ವಜನಿಕರ ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ.

ರಾಜ್ಯದ ಪ್ರತಿ ವಾಣಿಜ್ಯ ಮತ್ತು ಕೈಗಾರಿಕೆ ಸಮುಚ್ಛಯಗಳು, ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು,ಆಸ್ಪತ್ರೆಗಳು, ಕ್ರೀಡಾ ಸಮುಚ್ಛಯಗಳು, ರೈಲ್ವೆ ಮತ್ತು ಬಸ್ ನಿಲ್ದಾಣಗಳು ಮತ್ತು ಸಂಘಟಿತ ಸಭೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕೆಂದು ಹೇಳುತ್ತಿದೆ. ಹೊಸ ನಿಯಮ ಪ್ರಕಾರ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಹೇಳುತ್ತಿದೆ.

ನಿಯಮ ಪಾಲಿಸದವರು ಮೊದಲೆರಡು ತಿಂಗಳು ದಂಡ ಕಟ್ಟಬೇಕು. ಮತ್ತೆ ಕೂಡ ಸಿಸಿಟಿವಿ ಕ್ಯಾಮರಾ ಅಳವಡಿಸದಿದ್ದರೆ ತಾತ್ಕಾಲಿಕವಾಗಿ ಸೀಲು ಹಾಕುವುದು ಮತ್ತು ಮುಚ್ಚಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com