ಬಂಗಾರದ ಮನುಷ್ಯ ಡಾ.ರಾಜ್ ಹಾಗೆ ಪಂಚೆ, ಪೇಟ ಸುತ್ತಿ ರೈತರ ಜೊತೆ ಭತ್ತ ನಾಟಿ ಮಾಡಲಿದ್ದಾರೆ ಸಿಎಂ!

ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಳ್ಳಿ ಗೆಟಪ್ ಧರಿಸಿ ಶನಿವಾರ ಭತ್ತ ನಾಟಿ ಮಾಡಲಿದ್ದಾರೆ....
ಪಂಚೆ, ಪೇಟ ಸುತ್ತಿ ರೈತರ ಜೊತೆ ಭತ್ತ ನಾಟಿ ಮಾಡಲಿದ್ದಾರೆ ಸಿಎಂ
ಪಂಚೆ, ಪೇಟ ಸುತ್ತಿ ರೈತರ ಜೊತೆ ಭತ್ತ ನಾಟಿ ಮಾಡಲಿದ್ದಾರೆ ಸಿಎಂ
ಮೈಸೂರು: ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಳ್ಳಿ ಗೆಟಪ್ ಧರಿಸಿ ಶನಿವಾರ ಭತ್ತ ನಾಟಿ ಮಾಡಲಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ  1972 ರಲ್ಲಿ ತೆರೆಕಂಡ ಸೂಪರ್ ಹಿಟ್ ಬಂಗಾರದ ಮನುಷ್ಯ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಮಾಡಿದ್ದ ಪಾತ್ರವನ್ನು ಕುಮಾರಸ್ವಾಮಿ ಪುನಾರಾವರ್ತಿಸಲಿದ್ದಾರೆ,  ಈ ಸಿನಿಮಾ ನೂರಾರು ಯುವಕರು ತಮ್ಮ ಹಳ್ಳಿಗಳಿಗೆ ವಾಪಾಸಾಗಿ ಕೃಷಿಯಲ್ಲಿ ತೊಡಗುವಂತೆ ಮಾಡಿತ್ತು,.
ಈ ಐತಿಹಾಸಿಕ ಸಿನಿಮಾದಲ್ಲಿ ಕೆಆರ್ ಎಸ್ ಕಟ್ಟಿದ ವಿಶ್ವೇಶ್ವರಯ್ಯ ಅವರ ಕೊಡುಗೆ ಬಗ್ಗೆ ಹೊಗಳಲಾಗಿತ್ತು. ರೈತರಿಗೆ  ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿರುವ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ರೈತರಿಗೆ  ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ರೈತರ ಜೊತೆ ನಾಟಿಗಿಳಿಯಲಿದ್ದಾರೆ,
ಐದು ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಲು ಸುಮಾರು 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ,  100 ಮಹಿಳೆಯರು, 50 ರೈತರು, ಮತ್ತು 25 ಜೋಡಿ ಎತ್ತಿಗಳ ಜೊತೆ ಸಿಎಂ ನಾಟಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ರೈತರ ಜೊತೆ ಚರ್ಚೆ ನಡೆಸಿ ಅವರ ಜೊತೆಯಲ್ಲಿಯೇ ಊಟ ಮಾಡಲಿದ್ದಾರೆ, ಪಕ್ಷದ ಕಾರ್ಯಕರ್ತರು ಕುಮಾರಣ್ಣ ನಾಟಿ ಮಾಡುವುದನ್ನು ನೋಡಲು ಎಲ್ ಸಿಡಿ ಅಳವಡಿಸಲಿದ್ದಾರೆ, 
ಎರೆಡು ಗಂಟೆ ಭತ್ತ ನಾಟಿ: ಬಂಗಾರದ ಮನುಷ್ಯ ಚಿತ್ರ ರಾಜೀವಪ್ಪನ ಪಾತ್ರದ ಮಾದರಿಯಲ್ಲೇ ರೈತರೊಂದಿಗೆ ಸೇರಿಕೊಂಡು ಮಣ್ಣಿನ ಮಗನಾಗಿ ಗದ್ದೆ ಇಳಿದು ನಾಟಿ ಮಾಡಲಿದ್ದಾರೆ. ಸಿಎಂ ಆ ದಿನದ ಉಡುಪೂ ಕೂಡ ಬದಲಾಗಲಿದೆ ಆಗಲಿದೆ. ಮಂಡ್ಯ ಚೆಡ್ಡಿ, ಬಣ್ಣ ಬಣ್ಣದ ಲುಂಗಿ, ಬಿಳಿ ಬನಿಯನ್, ತಲೆಗೊಂದು ಟವಲ್ ಹಾಕಿಕೊಂಡು ಗೆದ್ದ ಕೆಲಸ ಮಾಡಲಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ರೈತರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಭತ್ತ ನಾಟಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆಂದು  ಸಚಿವ ಸಿ,ಎಸ್ ಪುಟ್ಟರಾಜು ವಿವರಿಸಿದರು.
ಮಂಡ್ಯ ಜಿಲ್ಲೆಯಲ್ಲಿ 4 ವರ್ಷಗಳಿಂದಲೂ ಬರದಿಂದಾಗಿ ರೈತರು ಭತ್ತ ನಾಟಿ ಮಾಡಿರಲಿಲ್ಲ. ಈ ಬಾರಿ ಸಮೃದ್ಧ ಮಳೆಯಾಗಿದೆ. ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದೆ. ರೈತ ಮುಖದಲ್ಲಿ ಈಗ ಸಂತಸ ಅರಳಿದೆ. ಈ ವರ್ಷದ ಭತ್ತದ ಪೈರು ರೈತರಿಗೆ ಸಮೃದ್ಧಿ ಯಾಗಿ ಸಿಗಲಿದೆ ಎಂಬ ಕಾರಣಕ್ಕಾಗಿ ಭತ್ತ ನಾಟಿ ಕಾರ್ಯಕ್ಕೆ ಸಿಎಂ ಭೇಟಿ ನೀಡಿದರೆ ರೈತರ ಉತ್ಸಾಹ, ಬದುಕಿನ ಭರವಸೆ, ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಸಿಎಂ ಆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com