ಎಲ್ಲಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ನಾವು ಸಿದ್ದರಿದ್ದೇವೆ: ಜಿ. ಪರಮೇಶ್ವರ

ಕರ್ನಾಟಕದಲ್ಲಿ ವಾಸಿಸುತ್ತಿರುವ ಎಲ್ಲಾ ಅಕ್ರಮ ವಲಸಿಗರನ್ನು ರಾಜ್ಯದಿಂದ ಗಡೀಪಾರು ಮಾಡಲಾಗುತ್ತದೆ.ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ.
ಜಿ. ಪರಮೇಶ್ವರ
ಜಿ. ಪರಮೇಶ್ವರ
ಬೆಂಗಳೂರು: ಕರ್ನಾಟಕದಲ್ಲಿ ವಾಸಿಸುತ್ತಿರುವ ಎಲ್ಲಾ ಅಕ್ರಮ ವಲಸಿಗರನ್ನು ರಾಜ್ಯದಿಂದ ಗಡೀಪಾರು ಮಾಡಲಾಗುತ್ತದೆ.ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ. ಆಯಾ ದೇಶದ ರಾಯಭಾರಿಗಳಿಂದ ಸೂಕ್ತ ಮಾಹಿತಿ ಪಡೆದ ಬಳಿಕ ಈ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಹೇಳಿದರು. 
ಶುಕ್ರವಾರ ಮಾಧ್ಯಮ ಮಿತ್ರರ ಜತೆ ಮಾತನಾಡಿದ ಪರಮೇಶ್ವರ್ ರಾಜ್ಯದಲ್ಲಿ ಎಷ್ಟು ಅಕ್ರಮ ವಲಸಿಗರು ವೀಸಾ ಇಲ್ಲದೆ ಅಥವಾ ವೀಸಾ ಅವಧಿ ಮುಕ್ತಾಯದ ಬಳಿಕವೂ ಉಳಿದುಕೊಂಡಿದ್ದಾರೆ ಎನ್ನುವುದನ್ನು ರಾಜ್ಯ ಸರ್ಕಾರ ಅಂದಾಜಿಸಿದೆ ಎಂದಿದ್ದಾರೆ.
"ಅಧಿಕೃತ ವೀಸಾ  ಮತ್ತು ದಾಖಲೆಗಳಿಲ್ಲದ ಯಾವುದೇ ವಲಸಿಗರು ಅವರ ದೇಶಕ್ಕೆ ಹಿಂತಿರುಗಬೇಕಾಗುವುದು. ಇತ್ತೀಚೆಗೆ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿಕೊಂಡ  107 ಆಫ್ರಿಕನ್ ರಾಷ್ಟ್ರಗಳ ಪ್ರಜೆಗಳು ವೀಸಾ ಇಲ್ಲದೆ ಅಥವಾ ತಮ್ಮ ವೀಸಾ ಅವಧಿ ಮುಗಿದ ಬಳಿಕ ಸಹ ಇಲ್ಲಿಯೇ ಉಳಿದಿದ್ದಾರೆ ಎನ್ನುವುದು ತಿಳಿದುಬಂದಿದೆ. ಅವರನ್ನು ಇನ್ನು ಕೆಲವೇ ದಿನಗಳಲ್ಲಿ ಗಡೀಪಾರು ಮಾಡುತ್ತೇವೆ
"ಅವರು ತಮ್ಮ ತಮ್ಮ ದೇಶಕ್ಕೆ ತೆರಳಲು ನಾವುಗಳೇ ವಿಮಾನ ನಿಲ್ದಾಣಕ್ಕೆ ತೆರಳುವ ಹಾಗೂ  ಟಿಕೆಟ್ ಖರ್ಚನ್ನು ಭರಿಸುತ್ತೇವೆ. ಇದಕ್ಕೆ ಮುನ್ನ ಸಂಬಂಧಪಟ್ಟ ದೂತಾವಾಸಕ್ಕೆ ಇವರ ಕುರಿತು ಮಾಹಿತಿ ನೀಡಲಿದ್ದೇವೆ.ಹೀಗೆ ಗಡೀಪಾರಿಗೆ ಖರ್ಚಾದ ವೆಚ್ಚವನ್ನು ಆಯಾ ರಾಷ್ಟ್ರಗಳ ರಾಯಬಾರಿಗಳಿಂದ ಸಂಗ್ರಹಿಸಲಾಗುತ್ತದೆ  " ಪರಮೇಶ್ವರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com