ಚಂದ್ರಯಾನ -2 ಉಪಗ್ರಹದ ತೂಕ 600 ಕೆಜಿ ಏಕೆ ಎನ್ನುವ ಪ್ರಶ್ನೆಗೆ ಲ್ಯಾಂಡರ್ ಒಮ್ಮೆ ಚಂದ್ರನ ಮೇಲ್ಮೈ ತಲುಪಿದ ಬಳಿಕ ಅದು ಪ್ರಮುಖ ಉಪಗ್ರದಿಂದ ಕಳಚಿಕೊಳ್ಳಲಿದೆ. ಆಗ ಉಪಗ್ರಹವು ಅಸ್ಥ್ರವಾಗುವ ಸಂಭವವಿದೆ, ಇದರಿಂದಾಗಿ ಲ್ಯಾಂಡಿಂಗ್ ವಿನ್ಯಾಸದ ಮಾರ್ಪಾಡು ಅಗತ್ಯವೆಂದು ಅರಿತಿದ್ದಾರೆ. ಅಲ್ಲದೆ ಆರ್ಬಿಟರ್ ಹೆಚ್ಚು ಹಂತಗಳನ್ನು ಹೊಂದಿರಲಿದೆ, ಇದಕ್ಕೆ ಹೆಚ್ಚಿನ ಪ್ರಮಾಣದ ಇಂಧನ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.