ಅನಧಿಕೃತ ಹೋರ್ಡಿಂಗ್ಸ್ ತೆರವುಗೊಳಿಸಲು ಬಿಬಿಎಂಪಿ ಖರ್ಚು ಮಾಡಿದ್ದು ಬರೋಬ್ಬರೀ 63 ಲಕ್ಷ !

ಬೆಂಗಳೂರು ಮಹಾನಗರ ಪಾಲಿಕೆ ತನ್ನ ಮೂರು ವಲಯಗಳಲ್ಲಿದ್ದ ಅನಧಿಕೃತ ಹೋರ್ಡಿಂಗ್ಸ್ ತೆರವುಗೊಳಿಸಲು ಬರೋಬ್ಬರೀ 63 ಲಕ್ಷ ರು ಹಣ...
ಬೆಂಗಳೂರಿನ ಹೋರ್ಡಿಂಗ್ಸ್ ಮತ್ತು ಕಟೌಟ್
ಬೆಂಗಳೂರಿನ ಹೋರ್ಡಿಂಗ್ಸ್ ಮತ್ತು ಕಟೌಟ್
Updated on
ಬೆಂಗಳೂರು:  ಬೆಂಗಳೂರು ಮಹಾನಗರ ಪಾಲಿಕೆ ತನ್ನ ಮೂರು ವಲಯಗಳಲ್ಲಿದ್ದ ಅನಧಿಕೃತ ಹೋರ್ಡಿಂಗ್ಸ್ ತೆರವುಗೊಳಿಸಲು ಬರೋಬ್ಬರೀ  63 ಲಕ್ಷ ರು  ಹಣ ಖರ್ಚು ಮಾಡಿದೆ, ಹಾಗೂ ದಂಡವಾಗಿ ಕೇವಲ 2.66 ಲಕ್ಷ ರು ಹಣ ಸಂಗ್ರಹಿಸಿದೆ.
ಬಿಬಿಎಂಪಿ  ಕೌನ್ಸಿಲ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ  ಇದರ ಬಗ್ಗೆ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದಾರೆ.  ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಿಂದ ಕೇವಲ ಕಡಿಮೆ ಮೊತ್ತದ ಹಣವನ್ನು ದಂಡವಾಗಿ ಪಡೆದಿದೆ. 
ಅನಧಿಕೃತ ಹೋರ್ಡಿಂಗ್ ತೆರವುಗೊಳಿಸಿದ ನಂತರ ಅದರ ಕಬ್ಬಿಣವನ್ನು ಹರಾಜು ಹಾಕಲಾಗಿದೆ, ಆದರೆ ಅದರ ಆದಾಯದ ಲೆಕ್ಕ ಮಾತ್ರ ಎಲ್ಲೂ ಲಭ್ಯವಿಲ್ಲ ಎಂದು ಬಸವನಗುಡಿ ಕೌನ್ಸಿಲರ್ ಬಿ,ಎಸ್ ಸತ್ಯನಾರಾಯಣ ಹೇಳಿದ್ದಾರೆ,.
ಜಾಹೀರಾತುಗಳಿಂದ ಆದಾಯದ ಬಗ್ಗೆ ಪ್ರಶ್ನಿಸಿರುವ ಅವರು, 2012 ಮತ್ತು 2015ರ ಅವಧಿಯಲ್ಲಿ  ಪ್ರತಿ ವರ್ಷ ಜಾಹೀರಾತಿನಿಂದ 10.4 ಕೋಟಿ ರು ಹಣ ಸಂಗ್ರಹವಾಗಿತ್ತು, 2008 ಮತ್ತು 2010 ರಲ್ಲಿ ಪ್ರತಿ ವರ್ಷ 18.2 ಕೋಟಿ ರು ಹಣ ಸಂಗ್ರಹವಾಗಿತ್ತು, ಕೋರ್ಟ್ ನಲ್ಲಿ ನಾವು 10 ಸಾವಿರ ಹೋರ್ಡಿಂಗ್ಸ್ ಎಂದು ಕೇಳಲ್ಪಟ್ಟೋ, ಆದರೆ ದಾಖಲೆಯ ಪ್ರಕಾರ 3,166 ಹೋರ್ಡಿಂಗ್ಸ್ ಅದರಲ್ಲಿ 2,039 ಮಾತ್ರ ಅನಧಿಕೃತ ಎಂದು ನಮೂದಾಗಿದೆ ಎಂದು ತಿಳಿಸಿದ್ದಾರೆ.
ಅಳವಡಿಸಿರುವ 23 ಆಪ್ಟಿಕಲ್ ಪೈಬರ್ ಕೇಬಲ್ ನಲ್ಲಿ ಕೇವಲ 9ಕ್ಕೆ ಮಾತ್ರ ಹಣ ಪಾವತಿಸಲಾಗಿದೆ, ಅದರಿಂದಲೇ ಬಿಬಿಎಂಪಿಗೆ ಆದಾಯ ನಷ್ಟವಾಗುತ್ತಿದೆ, ನಾವು ಹಲವು ಬಾರಿ ಆಪರೇಟರ್ ಗಳನ್ನು ಸಭೆಗೆ ಆಹ್ವಾನಿಸಿದ್ದೆವೆ, ಆದರೆ ಅದರಲ್ಲಿ .ಬಹುತೇಕ ಮಂದಿ ಪ್ರತಿಕ್ರಿಯಿಸಿಲ್ಲ ಎಂದು ಬಿಬಿಎಂಪಿ ತೆರಿಗೆ ಮತ್ತು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂಕೆ ಗುಣಶೇಖರ್ ಹೇಳಿದ್ದಾರೆ.
2017-18ನೇ ಸಾಲಿನಲ್ಲಿ, ಮೊಬೈಲ್ ಟವರ್ ಗಳಿಂದ ಸುಮಾರು 300 ಕೋಟಿ ರು ಆದಾಯ ನಿರೀಕ್ಷಿಸಿದ್ದೆವು,  ಆದರೆ ಕೇವಲ 53 ಕೋಟಿ ರು ಮಾತ್ರ ನಮಗೆ ದೊರೆತಿದ್ದು,  ಭೂಮಿ ಒಳಗೆ ಕೇಬಲ್ ಗಳ ಅಳವಡಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳಿರುವ ಅವರು ಪ್ರತಿ ಮೀಟರ್ ಕೇಬಲ್ ಗೆ 600ರ ವೆಚ್ಚ ತಗಲುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com