ಶಿವಮೊಗ್ಗ ಸುತ್ತಮುತ್ತ ಭಾರೀ ಮಳೆ : ಮನೆಗಳಿಗೆ ನುಗ್ಗಿದ ನೀರು

ಕಳೆದೊಂದು ವಾರದಿಂದ ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮನೆಗಳಿಗೆ ನುಗ್ಗಿದ ನೀರು
ಮನೆಗಳಿಗೆ ನುಗ್ಗಿದ ನೀರು

ಶಿವಮೊಗ್ಗ :  ಕಳೆದೊಂದು ವಾರದಿಂದ ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ  ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

  ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನರು ನಿದ್ದೆಯಿಲ್ಲದೆ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಜನರು ಮನೆಗೆ  ನುಗ್ಗಿದ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದ ದೃಶ್ಯಗಳು ಸರ್ವೇಸಾಮನ್ಯ ಎಂಬಂತೆ ಕಂಡುಬರುತ್ತಿದೆ.

 ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ಮತ್ತು ಭದ್ರಾವತಿ ತಾಲೂಕುಗಳಲ್ಲಿ  ಕಳೆದೆ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ.ಈ ಮಧ್ಯೆ  ತುಂಗಾ, ಭದ್ರಾ, ಮತ್ತು ಶರಾವತಿ ನದಿಗಳ  ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು. ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಲಿಂಗನಮಕ್ಕಿ ಜಲಾಯಶಕ್ಕೆ 36 ಸಾವಿರದ 045 ಕ್ಯೂಸೆಕ್ಸ್  ಒಳ ಹರಿವಿದ್ದು, 1772.89 ಅಡಿಗಳಷ್ಟು ನೀರು ಸಂಗ್ರಹವಾಗಿದೆ.  ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು 11,483 ಕ್ಯೂಸೆಕ್ಸ್ ನಷ್ಟಿದ್ದು, 155.10 ಅಡಿಗಳಷ್ಟು ನೀರು ಸಂಗ್ರವಾಗಿದೆ.  ಜಲಾಶಯದ ಒಟ್ಟು ಸಂಗ್ರಹದ ಮಟ್ಟ 186 ಅಡಿಗಳಷ್ಟಾಗಿದೆ.

ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.  ಪ್ರಕೃತಿ ಕಾನನ ಮಧ್ಯೆ ಮೈದುಂಬಿ ನಲಿಯುತ್ತಿರುವ ಜೋಗ ಜಲಪಾತ  ಸೊಬಗು ಸವಿಯಲು ಎರಡು ಕಣ್ಣುಗಳು ಸಾಲದೆಂಬಂತಿದೆ. ಜೋಗ ಜಲಪಾತ  ನೋಡಲು ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com