ಮದುವೆಗೆ ಸೂಟ್ ಸರಿಯಾಗಿ ಹೊಲಿಯದ ಟೈಲರ್ ಗೆ 12 ಸಾವಿರ ದಂಡ!

ಫ್ರಿಡ್ಜ್, ವಾಷಿಂಗ್ ಮಷೀನ್, ಮೊಬೈಲ್ ಹೀಗೆ ಗ್ಯಾಡ್ಜೆಟ್ ಅಥವಾ ಯಂತ್ರೋಪಕರಣಗಳ ಲೋಪದೋಷಕ್ಕೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸುವುದನ್ನು ಸಾಮನ್ಯವಾಗಿ ಕೇಳಿರುತ್ತೇವೆ.
ಮದುವೆಗೆ ಸೂಟ್ ಸರಿಯಾಗಿ ಹೊಲಿಯದ ಟೈಲರ್ ಗೆ 12 ಸಾವಿರ ದಂಡ!
ಮದುವೆಗೆ ಸೂಟ್ ಸರಿಯಾಗಿ ಹೊಲಿಯದ ಟೈಲರ್ ಗೆ 12 ಸಾವಿರ ದಂಡ!
ಮೈಸೂರು: ಫ್ರಿಡ್ಜ್, ವಾಷಿಂಗ್ ಮಷೀನ್, ಮೊಬೈಲ್ ಹೀಗೆ ಗ್ಯಾಡ್ಜೆಟ್ ಅಥವಾ ಯಂತ್ರೋಪಕರಣಗಳ ಲೋಪದೋಷಕ್ಕೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸುವುದನ್ನು ಸಾಮನ್ಯವಾಗಿ ಕೇಳಿರುತ್ತೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಟೈಲರ್ ಗೆ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ. 
ಕುವೆಂಪು ನಗರದ ಸುನಿಲ್ ತಮ್ಮ ವಿವಾಹಕ್ಕಾಗಿ ಸೂಟ್ ಹೊಲೆಯಲು ಕೊಟ್ಟಿದ್ದರು. ಆದರೆ ಟೈಲರ್ ಮಾತ್ರ ಅಳತೆಗೆ ಸರಿಯಾಗಿ ಹೊಲಿಯದೇ ಎಡವಟ್ಟು ಮಾಡಿದ್ದಾರೆ. ಇದರಿಂದಾಗಿ ವರ ರಿಸೆಪ್ಷನ್ ಗೆ ಸಿದ್ಧ ಸೂಟ್ ನಲ್ಲೆ ತೆರಳಬೇಕಾಯಿತು. ಟೈಲರ್ ನ ಈ ಪ್ರಮಾದದಿಂದ ಅಸಮಾಧಾನಗೊಂಡ ಸುನಿಲ್, ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸುಮಾರು ಎರಡು ವರ್ಷಗಳ ನಂತರ ಕೋರ್ಟ್ ತೀರ್ಪು ನೀಡಿದ್ದು, ಟೈಲರ್ ಗೆ ಒಟ್ಟಾರೆ 18, 582 ರೂಪಾಯಿ ದಂಡ ವಿಧಿಸಿದೆ. 
ಸೂಟ್ ಹೊಲಿಯಲು ಕೊಟ್ಟಿದ್ದ ಟೈಲರ್ ಅದನ್ನು ಸಿದ್ಧಪಡಿಸಿ ವಾಪಸ್ ನೀಡಿದ್ದಾಗ ಅಳತೆಗೆ ಸರಿ ಹೊಂದದೇ ಇರುವುದು ಸುನಿಲ್ ಗಮನಕ್ಕೆ ಬಂದಿದೆ. ಒಂದಲ್ಲಾ ಅಂತ 4 ಬಾರಿ ಅಳತೆಗೆ ಅನುಗುಣವಾಗಿ ಮಾರ್ಪಾಡು ಮಾಡಿದರೂ ಸಹ ಸರಿ ಹೊಂದಲಿಲ್ಲ. ಈ ನಡುವೆ ಟೈಲರ್ ಕರೆ ಸ್ವೀಕರಿಸುವುದನ್ನೂ ನಿಲ್ಲಿಸಿದ್ದ ಈ ಹಿನ್ನೆಲೆಯಲ್ಲಿ ಸುನಿಲ್ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. 
ಅಂತಿಮವಾಗಿ ಗ್ರಾಹಕರ ನ್ಯಾಯಾಲಯದ ತೀರ್ಪು ಪ್ರಕಟಗೊಂಡಿದ್ದು, ಬಟ್ಟೆಯ ಬೆಲೆಯೂ ಸೇರಿ ಒಟ್ಟಾರೆ 18,525 ರೂಪಾಯಿ ಪರಿಹಾರ ಹಾಗೂ 2,000 ರೂಪಾಯಿ ಕೋರ್ಟ್ ಖರ್ಚನ್ನು ಪರಿಹಾರ ರೂಪದಲ್ಲಿ ನೀಡಲು ಟೈಲರ್ ಗೆ ಕೋರ್ಟ್ ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com