ಬೆಂಗಳೂರು ಜೈಲಿನಲ್ಲಿ ಕವಿತೆ ಬರೆದಿದ್ದ ವಾಜಪೇಯಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಹಲವಾರು ಜನ ಸಂಘ ನಾಯಕರನ್ನು ಬಂಧನಕ್ಕೊಳಪಡಿಸಿ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು. ಅಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಕೂಡ ಜನ ಸಂಘದ ನಾಯಕರಾಗಿದ್ದರು...
ಬೆಂಗಳೂರು ಜೈಲಿನಲ್ಲಿ ಕವಿತೆ ಬರೆದಿದ್ದ ವಾಜಪೇಯಿ
ಬೆಂಗಳೂರು ಜೈಲಿನಲ್ಲಿ ಕವಿತೆ ಬರೆದಿದ್ದ ವಾಜಪೇಯಿ
Updated on
ಹುಬ್ಬಳ್ಳಿ: ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಹಲವಾರು ಜನ ಸಂಘ ನಾಯಕರನ್ನು ಬಂಧನಕ್ಕೊಳಪಡಿಸಿ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು. ಅಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಕೂಡ ಜನ ಸಂಘದ ನಾಯಕರಾಗಿದ್ದರು. 
ಸಂಸತ್ ಸದಸ್ಯರಾಗಿದ್ದ ವಾಜಪೇಯಿ, ಮಧು ದಂಡವತೆ, ಅಡ್ವಾಣಿ ಸೇರಿ ನಾಲ್ವರು ನಾಯಕರು ಬೆಂಗಳೂರಿಗೆ ಬಂದಿದ್ದರು. ಅದೇ ವೇಳೆಗೆ ತುರ್ತು ಪರಿಸ್ಥಿತಿ ಘೋಷಿಸಿದ್ದ ಇಂದಿರಾ ಗಾಂಧಿ ಸರ್ಕಾರ ವಾಜಪೇಯಿ, ಅಡ್ವಾಣಿ ಮತ್ತು ಮಧು ದಂಡವತೆಯನ್ನು ಬಂಧನಕ್ಕೊಪಡಿಸಿ ಬೆಂಗಳೂರಿನ ಕೇಂದ್ರೀಯ ಕಾರಾಗೃಹದಲ್ಲಿರಿಸಿದ್ದರು. 
ಕರ್ನಾಟದಲ್ಲಿ ನೂರಾರು ಜನ ಸಂಘ ಕಾರ್ಯಕರ್ತರಿದ್ದರು. ಸರ್ಕಾರದ ನಿರ್ಧಾರಗಳ ವಿರುದ್ಧ ಕೆಲಸ ಮಾಡುತ್ತಿರುವವರನ್ನು ಬಂಧನಕ್ಕೊಳಪಡಿಸಲಾಗಿತ್ತು. ನಾಯಕರನ್ನು ಭೇಟಿಯಾಗುವ ಸಲುವಾಗಿ ಕೆಲವರು ಬೆಂಗಳೂರು ನಗರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಕಾರಾಗೃಹದಲ್ಲಿ ವಾಜಪೇಯಿಯವರು ಬರೆಯುತ್ತಿದ್ದ ಕವಿತೆಗಳನ್ನು ಹುಬ್ಬಳ್ಳಿಗೆ ತರುತ್ತಿದ್ದರು. ವರ್ಷಗಳಿಗೂ ಹೆಚ್ಚು ಕಾಲ ಕಾರಾಗೃಹದಲ್ಲಿದ್ದ ವಾಜಪೇಯಿಯವರು ಸಾಕಷ್ಟು ಕವಿತೆಗಳನ್ನು ಬರೆದಿದ್ದರು. 
ಪತ್ರಕರ್ತರಾಗಿರುವ ಸರ್ಜು ಕಾತ್ಕರ್ ಅವರು, ಅಂದು ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡಿದ್ದ ಕಾತ್ಕರ್ ಅವರು, ವಾಜಪೇಯಿಯವರು ಬರೆದಿದ್ದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡುವಂತೆ ಮನವಿ ಮಾಡಿಕೊಂಡಿದ್ದರು. 
ಅಂದಿನ ದಿನಗಳನ್ನು ನೆನೆದು ಪ್ರತಿಕ್ರಿಯೆ ನೀಡಿರು ಕಾತ್ಕಲ್ ಅವರು, ವಾಜಪೇಯಿಯವರು ಬರೆಯುತ್ತಿದ್ದ ಕವಿತೆಗಳನ್ನು ಅನುವಾದ ಮಾಡಲು ಆರಂಭಿಸಿದ್ದ ಕಾರ್ಯಕರ್ತರು ನಂತರ ಅನ್ನು ಮುದ್ರಣ ಮಾಡಿ, ಪೋಸ್ಟರ್ ಗಳನ್ನು ಸಿದ್ಧಪಡಿಸುತ್ತಿದ್ದರು. ವಾಜಪೇಯಿಯವರು ಬರೆಯುತ್ತಿದ್ದ ಕವಿತೆಗಳ ಪೋಸ್ಟರ್ ಗಳು ವಿಶ್ವವಿದ್ಯಾಲಯಗಳ ಗೋಡೆಗಳ ಮೇಲೆ, ಹುಬ್ಬಳ್ಳಿ, ಧಾರವಾಡದ ಬೀದಿಗಳಲ್ಲಿ ಅಂಟಿಸಲಾಗುತ್ತಿತ್ತು. ಹಲವು ಬಾರಿ ಪೊಲೀಸರು ಆ ಪೋಸ್ಟರ್ ಗಳನ್ನು ಕಿತ್ತು ಹಾಕುವ ಕಾರ್ಯಗಳನ್ನೂ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 
ವಾಜಪೇಯಿ ಅತ್ಯುತ್ತಮ ಕವಿತೆಗಾರರಾಗಿದ್ದರು. ಅವರ ಬರವಣಿಗೆ ಹಾಗೂ ಕವಿತೆಗಳು ಭಾಷೆಯ ಶ್ರೀಮಂತಿಕೆಯನ್ನು ತೋರಿಸುತ್ತಿತ್ತು. ಪದಗಳನ್ನು ಹೇಗೆ ಜೋಡಿಸಬೇಕು ಹಾಗೂ ಅದರಲ್ಲಿ ಅರ್ಥಗಳನ್ನು ಹೇಗೆ ಸೃಷ್ಟಿಸಬೇಕೆಂಬುದು ಅವರಿಗೆ ತಿಳಿದಿತ್ತು. ಜೈಲಿನಲ್ಲಿ ವಾಜಪೇಯಿ ಬರೆಯುತ್ತಿದ್ದ ಕವಿತೆ 'ಕೈದಿ ಕವಿರಾಯ್' ( ಕೈದಿ ಎಂದರೆ ಜೈಲು ಹಕ್ಕಿ ಮತ್ತು ಕವಿರಾಯ್ ಎಂದರೆ ಕವಿತೆಗಾರ). ಜೈಲಿನಲ್ಲಿ ವಾಜಪೇಯಿ ಬರೆಯುತ್ತಿದ್ದ ಕವಿತೆಗಳು ಅವರಲ್ಲಿದ್ದ ಭಾವನಾತ್ಮಕತೆಯನ್ನು ತೋರಿಸುತ್ತಿತ್ತು. ಹೊಸ ಬೆಳಕನ್ನು ನೋಡುವ ಅವರ ಆಸೆಯನ್ನು ಅವರ ಕವಿತೆಗಳು ತೋರಿಸುತ್ತಿತ್ತು. 
1999ರಲ್ಲಿ ವಾಜಪೇಯಿಯವರ ಮೇರಿ ಎಖ್ಯಾವನ್ ಕವಿತಾಯೆ ಎಂಬ ಕವಿತೆ ಕನ್ನಡಕ್ಕೆ ಅನುವಾದ ಮಾಡುವಂತೆ ಕೇಂದ್ರ ಸರ್ಕಾರದಿಂದ ಕಾಕತ್ಕರ್ ಅವರಿಗೆ ಮನವಿ ಬಂದಿತ್ತು. ಕೇಂದ್ರ ಸಾಂಸ್ಕೃತಿಕ ಸಚಿವಾಲಯ ವಾಜಪೇಯಿಯವರ ಕವಿತೆಗಳನ್ನು ದೇಶದ 24 ಭಾಷೆಗಳಲ್ಲಿ ಅನುವಾದ ಮಾಡಲು ನಿರ್ಧರಿಸಿತ್ತು. 
ಮೊದಲಿಗೆ ಕೇಂದ್ರ ಸರ್ಕಾರದಿಂದ ಬಂದ ಈ ಮನವಿಯನ್ನು ನಾನು ತಿರಸ್ಕರಿಸಿದ್ದೆ. ವಾಜಪೇಯಿ ಕವಿತೆ ಅನುವಾದ ಮಾಡಲು ನಾನು ಬಿಜೆಪಿ ವ್ಯಕ್ತಿಯಲ್ಲ. ರಾಜಕೀಯ ವ್ಯಕ್ತಿಗಳು ಪ್ರಧಾನಮಂತ್ರಿಗಳು ಬರೆಯುವ ಕವಿತೆಗಳನ್ನು ನಾನು ಅನುವಾದ ಮಾಡುವುದಿಲ್ಲ ಎಂದು ಹೇಳಿದ್ದೆ. ಅಂದು ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು, ನನಗೆ ಕರೆ ಮಾಡಿ, ಅನುವಾದ ಮಾಡುವಂದೆ ಬಲವಂತ ಮಾಡಿದರು. ನನ್ನ ಮಾರ್ಗದರ್ಶಕರೊಬ್ಬರು ನನ್ನೊಂದಿಗೆ ಮಾತನಾಡಿ, ಕವಿತೆಗಳನ್ನು ಕವಿತೆಗಳಂತೆ ನೋಡಿ, ಪ್ರಧಾನಮಂತ್ರಿಗಳು ಬರೆದಿದ್ದಾರೆಂದು ನೋಡಬೇಡಿ. ಬಳಿಕ ನಾನು ಅನುವಾದ ಮಾಡಲು ನಿರ್ಧರಿಸಿದ್ದೆ. ಕೆಲವೇ ತಿಂಗಳಲ್ಲಿ ಆ ಕೆಲಸವನ್ನು ಪೂರ್ಣಗೊಳಿಸಿದ್ದೆ. ವಾಜಪೇಯಿಯವರ 51 ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದೆ. ಇದಲ್ಲದೆ, ಬೆಂಗಳೂರು ಜೈಲಿನಲ್ಲಿದ್ದಾಗ ವಾಜಪೇಯಿಯವರು ಬರೆದಿದ್ದ ಪುಸ್ತಕದಲ್ಲಿದ್ದ 10 ಕವಿತೆಗಳನ್ನೂ ಅನುವಾದ ಮಾಡಿದ್ದೆ. ಈ ಪುಸ್ಕತ 1999ರಲ್ಲಿ ರಾಜಧಾನಿ ದೆಹಲಿಯಲ್ಲಿ ಬಿಡುಗಡೆಗೊಂಡಿತ್ತು ಎಂದು ಕಾತ್ಕರ್ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com