ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್, ಎಸ್ ಅಬ್ದುಲ್ ನಝೀರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠದ ಮುಂದೆ ಕರ್ನಾಟಕ ಸರ್ಕಾರ ತನ್ನ ಅಹವಾಲು ಮಂಡಿಸಿದ್ದು, ರಾಜ್ಯ ಸರ್ಕಾರವು ಜುಲೈನಲ್ಲಿ ತಾನು ಈ ರೀತಿಯ ಪಂಜು, ಭರ್ಜಿ ಉಪಯೋಗಿಸಿ ಆನೆಗಳನ್ನು ತಡೆಯುವುದು ಸಲ್ಲದೆಂದು ಎಲ್ಲಾ ಅಧಿಕಾರಿಗಳಿಗೆ ಪತ್ರಗಳನ್ನು ಬರೆದಿದ್ದಾಗಿಯೂ ಈ ಸಂಬಂಧದ ಪ್ರಕ್ರಿಯೆಯು ಮುಂದುವರೆದಿದೆ ಎಂದೂ ತಿಳಿಸಿದೆ. ಇಷ್ಟಾಗಿಯೂ ಈ ಕ್ರಮ ಸಂಪೂರ್ಣಗೊಳ್ಳಲು ಇನ್ನೂ ಆರು ತಿಂಗಳ ಕಾಲಾವಕಾಶ ಬೇಕೆಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.