'5 ದಿನ ಆಹಾರವಿಲ್ಲದೇ ಬದುಕಿದ್ದೆವು, ಮತ್ತೆ ಹೊರ ಜಗತ್ತನ್ನು ನೋಡುತ್ತೇವೆ ಎಂಬ ಆಸೆ ಸತ್ತಿತ್ತು!'

ಹಿಂದೆಂದೂ ಕಂಡು ಕೇಳರಿಯದ ವಿಪತ್ತಿಗೆ ಕೊಡಗು ಸಾಕ್ಷಿಯಾಗಿದೆ. ಮಡಿಕೇರಿಯಿಂದ 35 ಕಿಮೀ ದೂರದಲ್ಲಿರುವ ಮುಕ್ಕೊಡ್ಲು ಗ್ರಾಮ ಸಂಪೂರ್ಣವಾಗಿ ...
ಪ್ರವಾಹ ಪೀಡಿತ ಕೊಡಗು
ಪ್ರವಾಹ ಪೀಡಿತ ಕೊಡಗು
ಮಡಿಕೇರಿ: ಹಿಂದೆಂದೂ ಕಂಡು ಕೇಳರಿಯದ ವಿಪತ್ತಿಗೆ ಕೊಡಗು ಸಾಕ್ಷಿಯಾಗಿದೆ. ಮಡಿಕೇರಿಯಿಂದ 35 ಕಿಮೀ ದೂರದಲ್ಲಿರುವ ಮುಕ್ಕೊಡ್ಲು ಗ್ರಾಮ ಸಂಪೂರ್ಣವಾಗಿ ನಾಶವಾಗಿದ್ದು ಎಕರೆಗಟ್ಟಲೇ ಎಸ್ಟೇಟ್ ಹಾಗೂ ಲೆಕ್ಕವಿಲ್ಲದಷ್ಟು ಮನೆಗಳು ಹಾಗೂ ರಸ್ತೆಗಳು ಮಹಾ ಪ್ರವಾಹದಲ್ಲಿ ಕೊಚ್ಚಿ ಹೋಗಿ ಭೂಪಟದಿಂದ ನಾಪತ್ತೆಯಾಗಿವೆ.
ಮುಕ್ಕೊಡ್ಲು ಗ್ರಾಮ ಎಲ್ಲಾ ರೀತಿಯ ಸಂಪರ್ಕಗಳನ್ನು ಕಡಿದುಕೊಂಡಿತ್ತು. ಸೇನೆ ಮತ್ತು ಎನ್ ಡಿಎರ್ಎಫ್ ಗಳು ರಕ್ಷಣಾ ಕಾರ್ಯ ಕೈಗಳ್ಳುವಲ್ಲಿ ವಿಫಲವಾಗಿದ್ದವು.  ಆದರೆ 30 ಮಂದಿಯ ಸ್ಥಳೀಯ ರಕ್ಷಣಾ ತಂಡ, ಇಲ್ಲಿನ ಭೂ ಪ್ರದೇಶದ ಬಗ್ಗೆ ಇಂಚಿಂಚು ತಿಳಿದಿದ್ದ ಈ ಸ್ಥಳೀಯ ರತ್ರಣಾ ತಂಡ ಮಾದಾಪುರದಲ್ಲಿದ್ದ ಕೋಟೆ ಬೆಟ್ಟ ಹತ್ತಿ ಕಾಡಿನಲ್ಲಿ ನಡೆದು ಮುಕ್ಕೋಡ್ಲು ಗ್ರಾಮ ತಲುಪಿದೆ,
ಶಾಸಕ ಅಪ್ಪಚ್ಚು ರಂಜನ್ ನೇತೃತ್ವದ 30 ಮಂದಿಯ ಈ ತಂಡ ದ ಇಬ್ಬರು ಸದಸ್ಯರು, ಹಗ್ಗದ ಮೂಲಕ ಪ್ರವಾಹ ಪೀಡಿತ ಗ್ರಾಮಕ್ಕೆ ತಲುಪಿ ಆರು ಮಂದಿಯನ್ನು ರಕ್ಷಿಸಿದ್ದಾರೆ. ಆಗಸ್ಟ್ 17 ರಂದು ಇಬ್ಬರು ಮಕ್ಕಳ ಸಮೇತ ಆರು ಮಂದಿಯನ್ನು ಕರೆ ತಂದು ನಿರಾಶ್ರಿತರ ಶಿಬಿರಕ್ಕೆ ಕರೆ ತಂದಿದ್ದಾರೆ, 
ಮುಕ್ಕೊಡ್ಲು ಗ್ರಾಮದ ಚೆನ್ನಿಪೆಟ್ಟೀರಾ ಮಾದಪ್ಪ ಅವರ ಕುಟುಂಬ ಪ್ರವಾಹಕ್ಕೆ ಸಿಲುಕಿತ್ತು.  ಈ ಕುಟುಂಬದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರು ಇದ್ದರು, ಅಡುಗೆ ಮಾಡಲು ಧವಸಧಾನ್ಯಗಳಿರಲಿಲ್ಲ, ಹೀಗಾಗಿ ಈ ಕುಟುಂಬ ಬದುಕುವ ಎಲ್ಲಾ ಭರವಸೆಗಳನ್ನು ಕಳೆದು ಕೊಂಡಿತ್ತು, ಇಲ್ಲಿನ ಸ್ಥಳೀಯ ರಕ್ಷಣಾ  ತಂಡದ 10 ಯುವಕರು ಕುಟುಂಬವನ್ನು ಸುರಕ್ಷಿತಕವಾಗಿ ನಿರಾಶ್ರಿತರ ಶಿಬಿರಕ್ಕೆ ತಲುಪಿಸಿದೆ,.ಕಳೆದ 5 ದಿನಗಳಿಂದ ಏನೂ ತಿನ್ನದೆ ಉಪವಾಸ ಇದ್ದೆವು, ನಾವು ಮತ್ತೆ ಹೊರ ಜಗತ್ತು ನೋಡುತ್ತೇವೆ ಎಂಬ ಭರವಸೆಯೇ ಇರಲಿಲ್ಲ ಎಂದು ಕುಟುಂಬದ ಚೊಂಡಮ್ಮ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com