ಕೇರಳ ಪ್ರವಾಹ: ಸಂತ್ರಸ್ಥರ ನೆರವಿಗಾಗಿ ಐಸಿಯು ಅಂಬ್ಯುಲೆನ್ಸ್ ಆಗಿ ಬದಲಾದ ಕೆಎಸ್ಆರ್ಟಿಸಿ ಬಸ್!

ರಾಜ್ಯ ರಸ್ತೆ ಸಾರಿಗೆ ಬಸ್ (ಕೆ ಎಸ್ ಆರ್ ಟಿಸಿ) ಒಂದನ್ನು ಐಸಿಯು ಆಂಬುಲೆನ್ಸ್ ಆಗಿ ಮಾರ್ಪಡಿಸಿ ಕೇರಳಕ್ಕೆ ರವಾನಿಸಲಾಗಿದೆ.
ಕೇರಳ ಪ್ರವಾಹ: ಸಂತ್ರಸ್ಥರ ನೆರವಿಗಾಗಿ ಐಸಿಯು ಅಂಬ್ಯುಲೆನ್ಸ್ ಆಗಿ ಬದಲಾದ ಕೆಎಸ್ಆರ್ಟಿಸಿ ಬಸ್!
ಕೇರಳ ಪ್ರವಾಹ: ಸಂತ್ರಸ್ಥರ ನೆರವಿಗಾಗಿ ಐಸಿಯು ಅಂಬ್ಯುಲೆನ್ಸ್ ಆಗಿ ಬದಲಾದ ಕೆಎಸ್ಆರ್ಟಿಸಿ ಬಸ್!
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಬಸ್ (ಕೆ ಎಸ್ ಆರ್ ಟಿಸಿ) ಒಂದನ್ನು ಐಸಿಯು ಆಂಬುಲೆನ್ಸ್ ಆಗಿ ಮಾರ್ಪಡಿಸಿ ಕೇರಳಕ್ಕೆ ರವಾನಿಸಲಾಗಿದೆ. ಕೇರಳ ನೆರೆ ಸಂತ್ರಸ್ಥರಿಗೆ ನೆರವಾಗಲು . 'ಗೋಲ್ಡನ್ ಅವರ್ ರಿಸ್ಕ್ ವ್ಯಾಗನ್" ಅನ್ನು ಬೆಂಗಳೂರಿನಿಂದ ಎರ್ನಾಕುಲಂ ಗೆ ಕಳುಹಿಸಲಾಗಿದೆ.
 ಬ್ರೈನ್ ಆಸ್ಪತ್ರೆಯ ಸಹಾಯದಿಂದ ರೂಪಿಸಲಾದ ಈ ವಿಶೇಷ ವಾಹನದಲ್ಲಿ ಎಂಟು ಹಾಸಿಗೆಗಳು, ಆಮ್ಲಜನಕ ಸಿಲಿಂಡರ್ ಗಳು, ವಾರ್ಮರ್ಸ್, ಮಲ್ಟಿಪ್ಯಾರಾ ಮಾನಿಟರ್, ಸಕ್ಷನ್ ಲೈನ್, IV ದ್ರವಗಳು, ಸ್ಪ್ಲಿಂಟ್, ಗಾಯದ ಡ್ರೆಸ್ಸಿಂಗ್ ವಸ್ತುಗಳು ಮತ್ತು ಎಲ್ಲಾ ತುರ್ತು ಔಷಧಿಗಳನ್ನು ಹೊಂದಿದೆ. ತರಬೇತಿ ಪಡೆದ ವೈದ್ಯರ ತಂಡ್ ಐಲ್ಲಿದ್ದು ವೈದ್ಯಕೀಯ ಚಿಕಿತ್ಸೆ ಹಾಗೂ ರೋಗಿಗಳ ಸ್ಥಳಾಂತರದಲ್ಲಿ ಪಾಲ್ಗೊಳ್ಳುತ್ತಾರೆ.
ಮಂಗಳವಾರ ಬೆಳಿಗ್ಗೆ, ಎರ್ನಾಕುಲಂ ಸುತ್ತಲಿನ ನಿರಾಶ್ರಿತರ ಶಿಬಿರದಲ್ಲಿರುವವರಿಗೆ ತುರ್ತು ವೈದ್ಯಕೀಯ ನೆರವು ಒದಗಿಸುವಲ್ಲಿ ಗೋಲ್ಡನ್ ಅವರ್ ತಂಡದ ಸದಸ್ಯರು ಎರ್ನಾಕುಲಂ ಜಿಲ್ಲಾ ಆಸ್ಪತ್ರೆಯ ಕ್ಷಿಪ್ರ ಕಾರ್ಯಾಚರಣೆ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯ ತಂಡವು ಮಂಗಳವಾರ ಎರ್ನಕುಲಂ ಜಿಲ್ಲೆ ಉತ್ತರ ಪರಮೂರ್ ತಾಲೂಕಿನಲ್ಲಿರುವ ಎರಡು ರಕ್ಷಣಾ ಶಿಬಿರಗಳನ್ನು ಭೇಟಿಯಾಗಿದ್ದು ಶಿಬಿರದಲ್ಲಿದ್ದ  ಸುಮಾರು 500 ಜನರಲ್ಲಿ  100 ಕ್ಕಿಂತ ಹೆಚ್ಚು ಜನರಿಗೆ ಟಿಟಿಇಮ್ಮ್ಯುನಿಜೇಷನ್ ಒದಗಿಸಿದೆ. ಬುಧವಾರ ಸಹ ತಂಡವು ಎರ್ನಾಕುಲಂ ಜಿಲ್ಲೆ ಇನ್ನಿತರೆ ಸ್ಥಳಗಳಲ್ಲಿರುವ ಆರೋಗ್ಯ ಶಿಬಿರಗಳಿಗೆ ಭೇಟಿ ನೀಡಿ ರೋಗನಿರೋಧಕ ಔಷಧಿಗಳನ್ನು ಮತ್ತು ಉಚಿತ ಸಲಹೆಗಳನ್ನು ನೀಡಿದೆ.
"ಇಂತಹಾ ಪ್ರಕೃತಿ ವಿಕೋಪದ ಬಳಿಕ ನೀರಿನಿಂದ ಹರಡಬಹುದಾದ ರೋಗಗಳು ವ್ಯಾಪಕವಾಗುವ ಸಾಧ್ಯತೆ ಇದೆ.ಇದಕ್ಕೆ ಮುಂಜಾಗ್ರತೆಯಾಗಿ ರೋಗ ನಿರೋಧಕಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಲಿದೆ."ಎರ್ನಾಕುಲಂ ನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಗೋಲ್ಡನ್ ಅವರ್ ತಂಡದ ಸದಸ್ಯ ಡಾ. ಶಶಿಕುಮಾರ್ ಎಚ್.ಎಸ್. ಹೇಳಿದರು.
ಕೆಎಸ್ಆರ್ಟಿಸಿ ಸಹಯೋಗದೊಂದಿಗೆ ನಾವು ಒಂದು ವಿಶಿಷ್ಟ ವ್ಯಾಗನ್ ಅನ್ನು ನಿರ್ಮಿಸಿದ್ದೇವೆ. ಇದರಲ್ಲಿ ಬಸ್ ಐಸಿಯು ಆಂಬ್ಯುಲೆನ್ಸ್ ಆಗಿ ಪರಿವರ್ತನೆಗೊಂಡಿದೆ. ಇದು ತುರ್ತುಸ್ಥಿತಿಯಲ್ಲಿರುವ ಸಂತ್ರಸ್ಥರಿಗೆ ಒಮ್ಮೆಗೆ  ಹೆಚ್ಚಿನ ಸಂಖ್ಯೆಯ ಜನರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಎಂದು ಬ್ರೈನ್ಸ್ ಆಸ್ಪತ್ರೆ ಸಂಸ್ಥಾಪಕ ಡಾ ಎನ್.ಕೆ. ವೆಂಕಟರಮಣ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com