ಸಾಂದರ್ಭಿಕ ಚಿತ್ರ
ರಾಜ್ಯ
ಮದುವೆ ದಿಬ್ಬಣದ ವಾಹನಕ್ಕೆ ಲಾರಿ ಡಿಕ್ಕಿ: ಸ್ಥಳದಲ್ಲೇ 6 ಮಂದಿ ದುರ್ಮರಣ
ಮದುವೆಗೆ ಹೊರಟಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆ ಪೆನುಕೊಂಡ ತಾಲೂಕಿನ ಸತ್ತಾರಪಲ್ಲಿ ಬಳಿ ...
ತುಮಕೂರು: ಮದುವೆಗೆ ಹೊರಟಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆ ಪೆನುಕೊಂಡ ತಾಲೂಕಿನ ಸತ್ತಾರಪಲ್ಲಿ ಬಳಿ ನಡೆದಿದೆ.
ವೈ.ಎಸ್.ಆರ್. ಪಕ್ಷದ ಮುಖಂಡರೊಬ್ಬರ ಪುತ್ರನ ಮದುವೆಗೆಂದು ಅನಂತಪುರಕ್ಕೆ ಬೊಲೆರೋ ವಾಹನದಲ್ಲಿ ತೆರಳುವ ವೇಳೆ ಧರ್ಮವರಂ ನಿಂದ ಬಾಳೆಹಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಮೃತಪಟ್ಟವರನ್ನು ಪೆನುಗೊಂಡ ತಾಲೂಕಿನ ತಿಮ್ಮಾಪುರ ಮೂಲದವರು ಎಂದು ಹೇಳಲಾಗಿದೆ. ಮತ್ತೆ 10 ಮಂದಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಈ ಸಂಬಂಧ ಪೆನುಗೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ