ಬೆಂಗಳೂರು : ರೈತರ ಕೃಷಿ ಸಾಲ ಮನ್ನಾ ಮಾಡಲು ಒತ್ತುವರಿ ಭೂಮಿ ವಶ

ಕೃಷಿ ಸಾಲ ಮನ್ನಾ ಯೋಜನೆಗಾಗಿ ಮುಂದಿನ ತಿಂಗಳಿನಿಂದ ನಗರದಾದ್ಯಂತ ಒತ್ತುವರಿಯಾಗಿರುವ ಬಿ. ಖರಾಬ್ ಭೂಮಿಯನ್ನು ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಒತ್ತುವರಿ  ಜಾಗದಲ್ಲಿದ್ದ ಅಂಗಡಿ ಧ್ವಂಸ
ಒತ್ತುವರಿ ಜಾಗದಲ್ಲಿದ್ದ ಅಂಗಡಿ ಧ್ವಂಸ

ಬೆಂಗಳೂರು:ನಗರದ ಭೂ ಒತ್ತುವರಿದಾರರು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ  ಘೋಷಿಸಿರುವ  ಬೃಹತ್ ಕೃಷಿ ಸಾಲ ಮನ್ನಾ ಯೋಜನೆಗಾಗಿ  ಹೆಚ್ಚಿನ ಹಣವನ್ನು ಒದಗಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ನಗರದಾದ್ಯಂತ ಒತ್ತುವರಿಯಾಗಿರುವ  ಬಿ. ಖರಾಬ್ ಭೂಮಿಯನ್ನು ವಶಪಡಿಸಿಕೊಳ್ಳಲು  ಜಿಲ್ಲಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಮೂಲಗಳ ಪ್ರಕಾರ ನಗರದಲ್ಲಿ 50 ಸಾವಿರ ಕೋಟಿ ರೂ. ಮೌಲ್ಯದ 15 ಸಾವಿರ ಎಕರೆ ಭೂ ಒತ್ತುವರಿಯಾಗಿದೆ. ಮುಂದಿನ ವಾರದಿಂದ  ಒತ್ತುವರಿಯಾಗಿರುವ ಬಿ. ಖರಾಬ್  ಭೂಮಿಗಳ ಪತ್ತೆ ಕಾರ್ಯ ಆರಂಭವಾಗಲಿದೆ.  ಗುಡ್ಡಗಳು, ಸಣ್ಣ ಪಥಗಳು, ಸ್ಮಶಾನಗಳು ಮತ್ತಿತರ ಜಮೀನುಗಳು  ಬಿ. ಖರಾಬ್  ಭೂಮಿಯಾಗಿದ್ದು, ಇವುಗಳು ಸಾರ್ವಜನಿಕ ಉದ್ದೇಶಗಳಿಗಾಗಿ ಅಥವಾ ಸರ್ಕಾರ ಉದ್ದೇಶಕ್ಕಾಗಿ  ಮೀಸಲಿಟ್ಟಿರುವ ಭೂಮಿಗಳಾಗಿವೆ.

ಒತ್ತುವರಿ ಭೂಮಿ ಮಾಹಿತಿ ದೊರೆತ  ಕೂಡಲೇ  ತೆರವು ಕಾರ್ಯಾಚರಣೆ  ಆರಂಭಿಸಲಾಗುತ್ತದೆ. ಒಂದು ವೇಳೆ ಭೂಮಿ ವಶಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ  ಹೆಚ್ಚಿನ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೆಲವು ಕಡೆಗಳಲ್ಲಿ  ತೆರವು ಕಾರ್ಯಾಚರಣೆ ನಡೆಸಿದರು.

ದಕ್ಷಿಣ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ  ಸಣ್ಣ ಪ್ರಮಾಣದ ಸರ್ವೆ ನಡೆಸಲಾಗಿದ್ದು, ಅಲ್ಲಿ 6 ಎಕರೆ 23 ಗುಂಟೆ ಪ್ರದೇಶವನ್ನು  ಪ್ರಮುಖ ಬಿಲ್ಡರ್ಸ್ ಗಳು ವಶಪಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಆದರೆ. ಇಂತಹ ಅನೇಕ ಹಳ್ಳಿಗಳು ಬೆಂಗಳೂರು ಸೇರಿದಂತೆ ಇಂತಹ ಸರ್ವೇ ನಡೆಸಿದ್ದರೆ ಮತ್ತಷ್ಟು ಒತ್ತುವರಿಯಾಗಿರುವ ಭೂಮಿ ಪತ್ತೆ ಹಚ್ಚಬಹುದು ಎಂದು ಸಹಾಯಕ ಆಯುಕ್ತ ಎಲ್. ಸಿ. ನಾಗರಾಜ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಒತ್ತುವರಿ ಭೂಮಿ ವಶದಿಂದ ಬರುವ ಹಣವನ್ನು  ರೈತರ ಕೃಷಿ ಸಾಲ ಮನ್ನಾ ಹಾಗೂ ಸರ್ಕಾರದ ಮತ್ತಿತರ ಯೋಜನೆಗಳಿಗೆ  ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂಬುದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com