18 ತಿಂಗಳಿನಿಂದ ಬಾಡಿಗೆ ಪಾವತಿಸದ ನಿರ್ಮಾಪಕ : ಆನಂದ್ ಅಪ್ಪುಗೋಳ್ ವಿರುದ್ಧ ಮತ್ತೆ ಕೇಸ್

ಸಂಗೊಳ್ಳಿ ರಾಯಣ್ಣ ನಗರ ಸಹಕಾರ ಸೊಸೈಟಿ ಮೂಲಕ ಸಾವಿರಾರು ಗ್ರಾಹಕರಿಗೆ ವಂಚಿಸಿದ ನಂತರ ಕನ್ನಡ ಚಿತ್ರರಂಗದ ನಿರ್ಮಾಪಕ ಆನಂದ್ ಅಪ್ಪುಗೋಳ್ , ವಿರುದ್ದ ಮತ್ತೆ ಕಾನೂನಿನ ಉರುಳು ಸುತ್ತಿಕೊಂಡಿದೆ.
ಆನಂದ್ ಅಪ್ಪುಗೋಳ್
ಆನಂದ್ ಅಪ್ಪುಗೋಳ್

ಬೆಳಗಾವಿ: ಸಂಗೊಳ್ಳಿ ರಾಯಣ್ಣ ನಗರ ಸಹಕಾರ ಸೊಸೈಟಿ ಮೂಲಕ ಸಾವಿರಾರು ಗ್ರಾಹಕರಿಗೆ ವಂಚಿಸಿದ ನಂತರ  ಕನ್ನಡ ಚಿತ್ರರಂಗದ ನಿರ್ಮಾಪಕ ಆನಂದ್ ಅಪ್ಪುಗೋಳ್ , ವಿರುದ್ದ ಮತ್ತೆ   ಕಾನೂನಿನ ಉರುಳು ಸುತ್ತಿಕೊಂಡಿದೆ.

ಗ್ರಾಹಕರಿಗೆ 250 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿರುವ ಬೆನ್ನಲ್ಲೇ ಇದೀಗ ಬೆಳಗಾವಿ ಮತ್ತಿತರ ಉತ್ತರ ಕರ್ನಾಟಕ ಭಾಗಗಳಲ್ಲಿ  ರಾಯಣ್ಣ  ಸೊಸೈಟಿ ನಡೆಯುತ್ತಿರುವ ಕಟ್ಟಡಗಳ ಬಾಡಿಗೆಯನ್ನು  18 ತಿಂಗಳಿನಿಂದ ಪಾವತಿಸದ ಹಿನ್ನೆಲೆಯಲ್ಲಿ ಹೊಸದಾಗಿ ಪ್ರಕರಣ ದಾಖಲಿಸಲಾಗಿದೆ.

ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆನಂದ್ ಅಪ್ಪುಗೋಳ್ ನನ್ನು ಮುಂಬೈಯಲ್ಲಿ ಪೊಲೀಸರು ಬಂಧಿಸಿ, ಆತನ ಎಲ್ಲಾ ಕಚೇರಿಗಳಿಗೆ ಬೀಗ ಜಡಿದು, ವಾಹನಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಅಲ್ಲಿಂದ ಈವರೆಗೂ ಬಾಡಿಗೆ ಪಾವತಿಸಿಲ್ಲ. ಮತ್ತೊಂದೆಡೆ ಕೇಸ್ ಇತ್ಯರ್ಥಗೊಳ್ಳುವವರೆಗೂ ಆತನಿಗೆ ಸೇರಿದ ಯಾವುದೇ ಆಸ್ತಿಯನ್ನು ಮಾರಾಟ ಮಾಡುವುದಿಲ್ಲ  ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದ್ ಅಪ್ಪುಗೋಳ್ ವಿರುದ್ಧದ ವಂಚನೆ  ಕೇಸ್ ಇತ್ಯರ್ಥವಾಗುವವರೆಗೂ ಕಟ್ಟಡವನ್ನು ಪಡೆಯಲು ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ. ಇತ್ತ ಬಾಡಿಗೆ ಕೂಡಾ ಸಿಗುತ್ತಿಲ್ಲ. ಇದರಿಂದ ಪ್ರಕರಣ ದಾಖಲಿಸಿರುವ ಮಾಲೀಕರು  ತಮ್ಮ ಆಸ್ತಿಯನ್ನು ವಾಪಾಸ್ ನೀಡುವಂತೆ ಮಾಲೀಕರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com