ಬೆಂಗಳೂರು: ಸದ್ಯದಲ್ಲೇ ಕಟ್ಟಡದ ಪ್ಲ್ಯಾನ್ ಗೆ ಆನ್ ಲೈನ್ ನಲ್ಲಿಯೇ ಒಪ್ಪಿಗೆ ಪಡೆಯಬಹುದು!

ರಾಜಧಾನಿ ಬೆಂಗಳೂರಿನಲ್ಲಿ ಮನೆ ಕಟ್ಟಬೇಕು ಅಂದುಕೊಂಡವರಿಗೆ ಸಿಹಿಸುದ್ದಿ. ಶೀಘ್ರದಲ್ಲಿಯೇ ಬೆಂಗಳೂರು ಮಹಾನಗರದಲ್ಲಿನ ಕಟ್ಟಡ ಯೋಜನೆ ಅನುಮೋದನೆಗೆ ಆನ್ ಲೈನ್ ನಲ್ಲಿಯೇ ಒಪ್ಪಿಗೆ ಪಡೆದುಕೊಳ್ಳಬಹುದು.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಮನೆ ಕಟ್ಟಬೇಕು ಅಂದುಕೊಂಡವರಿಗೆ ಸಿಹಿಸುದ್ದಿ. ಶೀಘ್ರದಲ್ಲಿಯೇ ಬೆಂಗಳೂರು ಮಹಾನಗರದಲ್ಲಿನ ಕಟ್ಟಡ ಯೋಜನೆ ಅನುಮೋದನೆಗೆ  ಆನ್ ಲೈನ್ ನಲ್ಲಿಯೇ ಒಪ್ಪಿಗೆ ಪಡೆದುಕೊಳ್ಳಬಹುದು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಿನ ವಾರ ಪುಣೆ ಮೂಲದ ಸಾಪ್ಟ್ ವೇರ್ ಕಂಪನಿಯಿಂದ ಸಾಪ್ಟ್ ವೇರ್ ವೊಂದನ್ನು ಅಭಿವೃದ್ದಿಪಡಿಸುತ್ತಿದೆ.  ಇದರಿಂದ ಮನೆ ಅಥವಾ ಕಚೇರಿ ನಿರ್ಮಾಣ ಮಾಡಲು ಆನ್ ಲೈನ್  ಮೂಲಕವೇ  ಬಿಬಿಎಂಪಿಯಿಂದ ಅನುಮೋದನೆ ಪಡೆದುಕೊಳ್ಳಬಹುದಾಗಿದೆ.

ಯಾವುದೇ ಮಧ್ಯವರ್ತಿ ಅಥವಾ ಭ್ರಷ್ಟಾಚಾರಕ್ಕೆ ಅವಕಾಶ ವಿಲ್ಲದಂತೆ ಕಟ್ಟಡ ಯೋಜನೆಗೆ ಅನುಮೋದನೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆದಾಗ್ಯೂ, ಒಂದು ವೇಳೆ ಕಟ್ಟಡ ನಿರ್ಮಾಣ ಯೋಜನೆ ಬಿಬಿಎಂಪಿ ಕಾನೂನಿನ ವ್ಯಾಪ್ತಿಗೊಳಪಡದಿದ್ದಲ್ಲಿ  ಸ್ಥಳದಲ್ಲಿಯೇ ಅದನ್ನು ತಿರಸ್ಕರಿಸುತ್ತದೆ. "ಒಂದು ಅಧಿಕೃತ ವಾಸ್ತುಶಿಲ್ಪಿ ವಿನ್ಯಾಸಗೊಳಿಸಿದ ಕಟ್ಟಡ ಯೋಜನೆಯನ್ನು ಪಡೆಯಬೇಕಾಗಿದೆ.

ಬಿಬಿಎಂಪಿ ವೆಬ್ ಸೈಟ್ ನಲ್ಲಿ   ಪ್ಲಾನಿಂಗ್ ಡಿಪಾರ್ಟ್ ಮೆಂಟ್ ಕ್ಲಿಕ್ ಮಾಡುವ ಮೂಲಕ ನಿಗದಿತ ನಮೂನೆ ಭರ್ತಿ ಮಾಡಬೇಕಾಗುತ್ತದೆ. ನಿವೇಶನದ ಆಯಾಮ, ಅಂತಸ್ತುಗಳ ಸಂಖ್ಯೆ, ಕಟ್ಟಡ ಎತ್ತರ ಮತ್ತಿತರ ಮಾಹಿತಿಯನ್ನು ನೀಡಬೇಕಾಗುತ್ತದೆ.

ಈ ಮಾಹಿತಿ ಆಧಾರದ ಮೇಲೆ ನಿಗದಿತ ಶುಲ್ಕ  ಕಾಣುತ್ತದೆ. ಅದನ್ನು ಆನ್ ಲೈನ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೇಡಿಟ್ ಕಾರ್ಡ್ ಮೂಲಕ ಪಾವತಿಸಬಹುದು ಎಂದು ಬಿಬಿಎಂಪಿ ( ನಗರ ಯೋಜನಾ ) ಹೆಚ್ಚುವರಿ ನಿರ್ದೇಶಕ ಆರ್. ಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಗೆ ತಿಳಿಸಿದ್ದಾರೆ.

ಒಂದು ಬಾರಿ ಅರ್ಜಿ ಸಲ್ಲಿಸಿದ ವ್ಯಕ್ತಿ ಅಥವಾ ಮಹಿಳೆಗೆ ವಿಶಿಷ್ಠ ನಂಬರ್ ದೊರೆಯುತ್ತದೆ. ಇದರಿಂದಾಗಿ ಪದೇ ಪದೇ ಬಿಬಿಎಂಪಿ ಕಚೇರಿಗೆ  ಅಲೆಯುವುದು ತಪ್ಪಲಿದೆ. ಅಲ್ಲದೇ ಒಂದು ಬಾರಿ ಯೋಜನೆ ಅನುಮೋದನೆಗೊಂಡ್ಡರೆ, ಇ- ಮೇಲ್ ಮೂಲಕ ಅದರ ಮಾಹಿತಿಯನ್ನು ತಿಳಿಸಲಾಗುತ್ತದೆ.

 ಕಟ್ಟಡ ಯೋಜನೆಗೆ  ಆನ್ ಲೈನ್ ನಲ್ಲಿಯೇ ಒಪ್ಪಿಗೆ  ಪಡೆದುಕೊಂಡರೂ, ಬಿಬಿಎಂಪಿ ಎಂಜಿನಿಯರ್ ಗಳು  ಸ್ಥಳಕ್ಕೆ ಭೇಟಿ ನೀಡಿ  ಕಟ್ಟಡ ನಿರ್ಮಾಣವನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರಸಾದ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com