ಕರ್ನಾಟಕ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತದಾನ ಪ್ರಗತಿಯಲ್ಲಿ

ರಾಜ್ಯಾದ್ಯಂತ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಪ್ರಗತಿಯಲ್ಲಿದ್ದು, ಮತದಾರರು ಸಾಧಾರಣ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಪ್ರಗತಿಯಲ್ಲಿದ್ದು, ಮತದಾರರು ಸಾಧಾರಣ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸುತ್ತಿದ್ದಾರೆ ಎಂದು ಮತಗಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಗಿ ಭದ್ರತೆಯೊಂದಿಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 40 ಸಾವಿರ ಭದ್ರತಾ ಸಿಬ್ಬಂದಿಯನ್ನು ರಾಜ್ಯಾದ್ಯಂತ ಮತಗಟ್ಟೆಗಳಲ್ಲಿ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗಿದೆ.

29 ನಗರಸಭೆಗಳ 2,529 ವಾರ್ಡುಗಳಿಗೆ, 53 ನಗರಸಭೆ, 23 ಪಟ್ಟಣ ಪಂಚಾಯತಿ ಮತ್ತು ಮೂರು ನಗರ ಪಾಲಿಕೆಗಳ 135 ವಾರ್ಡುಗಳಿಗೆ ಮತದಾನ ನಡೆಯುತ್ತಿದೆ.

ಒಟ್ಟು 8,340 ಅಭ್ಯರ್ಥಿಗಳಿದ್ದು 2,306 ಕಾಂಗ್ರೆಸ್, 2,203 ಭಾರತೀಯ ಜನತಾ ಪಾರ್ಟಿಯಿಂದ ಮತ್ತು 1,397 ಅಭ್ಯರ್ಥಿಗಳು ಜೆಡಿಎಸ್ ನಿಂದ ಕಣದಲ್ಲಿದ್ದಾರೆ. 814 ಅಭ್ಯರ್ಥಿಗಳು ನಗರಪಾಲಿಕೆಗಳಿಗೆ ಸ್ಪರ್ಧಿಸುತ್ತಿದ್ದು ಅವರಲ್ಲಿ 135 ಕಾಂಗ್ರೆಸ್ ನಿಂದ, 130 ಅಭ್ಯರ್ಥಿಗಳು ಬಿಜೆಪಿಯಿಂದ ಮತ್ತು 129 ಅಭ್ಯರ್ಥಿಗಳು ಜೆಡಿಎಸ್ ನಿಂದ ಇದ್ದಾರೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 26 ಲಕ್ಷ ದಾಖಲಾತಿ ಹೊಂದಿರುವ ಮತದಾರರಿದ್ದು 13.33 ಲಕ್ಷ ಮತದಾರರು ಮೈಸೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳಲ್ಲಿದ್ದಾರೆ.
2013ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 4,976 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 1,960, ಬಿಜೆಪಿ ಮತ್ತು ಜೆಡಿಎಸ್ 905 ಹಾಗೂ ಸ್ವತಂತ್ರ ಅಭ್ಯರ್ಥಿಗಳು 1,206 ಸ್ಥಾನಗಳಲ್ಲಿ ಜಯ ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com