ಬೆಂಗಳೂರು: 'ಜಲ ಕಳ್ಳ'ರ ವಿರುದ್ಧ ಬಿಎಂಟಿಎಫ್ ನಿಂದ ಎಫ್ ಐ ಆರ್ ದಾಖಲು!

ಅಕ್ರಮವಾಗಿ ನೀರು ಪೂರೈಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಬೆಂಗಳೂರು ನಗರಾಭಿವೃದ್ದಿ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿರ್ದೇಶನದ ಮೇರೆಗೆ ಬೆಂಗಳೂರು ಮಹಾನಗರ ಕಾರ್ಯಪಡೆ-ಬಿಎಂಟಿಎಫ್ ಎಫ್ ಐಆರ್ ದಾಖಲಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಕ್ರಮವಾಗಿ ನೀರು ಪೂರೈಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಬೆಂಗಳೂರು ನಗರಾಭಿವೃದ್ದಿ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿರ್ದೇಶನದ ಮೇರೆಗೆ  ಬೆಂಗಳೂರು ಮಹಾನಗರ ಕಾರ್ಯಪಡೆ-ಬಿಎಂಟಿಎಫ್ ಎಫ್ ಐಆರ್ ದಾಖಲಿಸುತ್ತಿದೆ.

ಈ ಸಂಬಂಧ ಬಿಡಬ್ಯ್ಲೂಎಸ್ ಎಸ್ ಬಿ ಎರಡು ವಿಚಕ್ಷಣಾ ದಳವನ್ನು ನೇಮಿಸಲಾಗಿದ್ದರೂ ನಗರಾದ್ಯಂತ 465 ದೂರುಗಳು ಬಂದಿವೆ. ಅಕ್ರಮ ನೀರು ಪೂರೈಕೆಯಿಂದಾಗಿ ಬಿಡಬ್ಲೂಎಸ್ ಎಸ್ ಬಿಗೆ ನಷ್ಟ ಉಂಟಾಗುತ್ತಿದೆ. ಬಹುತೇಕ ಪೊಲೀಸರು ಇಂತಹ ಪ್ರಕರಣಗಳನ್ನು ದಾಖಲಿಸಿಲ್ಲ.ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ನೀರು ಕದಿಯುವವರ ವಿರುದ್ಧ ದೂರು ದಾಖಲಿಸಲಾಗಿತಾದರೂ ಯಾವುದೇ ಪರಿಣಾಮ ಬೀರಿಲ್ಲ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಎಂಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಬಿಡಬ್ಲ್ಯೂಎಸ್ ಎಸ್ ಬಿ ಕಳುಹಿಸಿರುವ ಎಲ್ಲಾ ದೂರುದಾರರ ವಿರುದ್ಧ ಎಫ್ ಐಆರ್ ದಾಖಲಿಸಲಾಗುತ್ತಿದೆ.  ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ  ಪ್ರಕರಣ ದಾಖಲಿಸಲಾಗುತ್ತಿದೆ. ನೀರು ಕಳ್ಳತನ ಕೂಡಾ ಅಪರಾಧವಾಗಿದೆ ಎಂದು ಹೇಳಿದರು.

ಬಿಡಬ್ಲ್ಯೂಎಸ್ ಎಸ್ ಬಿ ಮುಖ್ಯಸ್ಥ ತುಷಾರ್ ಗಿರಿನಾಥ್ ಮಾತನಾಡಿ, ಕೋರಮಂಗಲ, ಸಹಕಾರ ನಗರ, ಬೈರಸಂದ್ರ, ಸುಲ್ತಾನ್ ಪಾಳ್ಯ,  ಹೂಡಿ, ರಾಮಮೂರ್ತಿನಗರ, ಬನಶಂಕರಿ ಮತ್ತು ಮೆಜೆಸ್ಟಿಕ್ ನಲ್ಲಿ ನೀರು ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಕಳ್ಳತನದ ಮೂಲಕ ನೀರು ಪಡೆಯುವವರ ವಿರುದ್ಧ  ಇತ್ತಿಚಿಗೆ ಬಿಡಬ್ಲ್ಯೂಎಸ್ ಎಸ್ ಬಿ ಕಾಯ್ದೆಗೆ ತಂದ ತಿದ್ದುಪಡಿ ಪ್ರಕಾರ ಗರಿಷ್ಠ ಎರಡು ವರ್ಷ ಕಾಲ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದರು.

ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವ ಅಥವಾ ಕಡಿಮೆಯಿರುವ ಮ್ಯಾನ್ ಹೋಲ್ ಗಳ  ಚಿತ್ರ ತೆಗೆದು  ತಮ್ಮ ಇಲಾಖೆಯ ಫೇಸ್ ಬುಕ್ ಪೇಸ್ ನಲ್ಲಿ  ಹಾಕಿದ್ದರೆ ಸೂಕ್ತ ಕ್ರಮ ಕೈಗೊಳ್ಳಲು ನೆರವಾಗುತ್ತದೆ. ಪ್ರಮುಖ ರಸ್ತೆಗಳಲ್ಲಿ ಈಗಾಗಲೇ  10ಸಾವಿರಕ್ಕೂ ಹೆಚ್ಚು  ಮ್ಯಾನ್ ಹೋಲ್ ಗಳನ್ನು ಪತ್ತೆ ಹಚ್ಚಲಾಗಿದೆ. ಎಲ್ಲಾ ಮ್ಯಾನ್ ವೋಲ್ ಗಳನ್ನು  ಸಮತಟ್ಟಾಗಿ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com