ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಪಿಜಿ ಕೋರ್ಸ್ ಗಳನ್ನು ಕೇಳೋರೇ ಇಲ್ಲ!

ರಾಜ್ಯದಲ್ಲಿನ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಸ್ನಾತಕೋತ್ತರ ಪದವಿ- ಪಿಜಿ ಕೋರ್ಸ್ ಗಳಿಗೆ ಬೇಡಿಕೆ ಇಲ್ಲದಂತಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿನ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಸ್ನಾತಕೋತ್ತರ ಪದವಿ- ಪಿಜಿ ಕೋರ್ಸ್ ಗಳಿಗೆ ಬೇಡಿಕೆ ಇಲ್ಲದಂತಾಗಿದೆ.

ಈ ಶೈಕ್ಷಣಿಕ ಸಾಲಿನಲ್ಲಿ  ಬೇಡಿಕೆ ಇಲ್ಲದ ಕಾರಣ ಎಂಟೆಕ್ ನಂತಹ ಕೆಲ ಪಿಜಿ ಕೋರ್ಸ್ ಗಳನ್ನು ರದ್ದುಪಡಿಸುವಂತೆ  ಶೇ. 30 ರಷ್ಟು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮನವಿ ಮಾಡಿಕೊಂಡಿವೆ.

ಖಾಸಗಿ ಕಾಲೇಜುಗಳ ಮಾತ್ರವಲ್ಲ, ವಿಟಿಯೂ ಕೂಡಾ ಬೆಂಗಳೂರು, ಹುಬ್ಬಳ್ಳಿ ಹಾಗೂ ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲ ಪಿಜಿ ಕೋರ್ಸ್ ಗಳನ್ನು ಸ್ಥಗಿತಗೊಳಿಸಿದೆ.

ಈ ಬಗ್ಗೆ ಮಾತನಾಡಿದ ಪ್ರೋಫೆಸರ್ ಹೆಚ್ ಎನ್ ಜಗನ್ನಾಥ ರೆಡ್ಡಿ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಕೆಲ ಪಿಜಿ ಕೋರ್ಸ್  ಗಳಿಗೆ ಬೇಡಿಕೆ ಇಲ್ಲದಂತಾಗಿದೆ.  ಪಿಜಿ ಕೋರ್ಸ್  ತೆಗೆದುಕೊಳ್ಳುವವರು ಕಳೆದ ಮೂರು ವರ್ಷಗಳಲ್ಲಿ ಶೇ.30ಕ್ಕಿಂತಲೂ ಹೆಚ್ಚಾದ ಕಾರಣ ಮುಚ್ಚಲಾಗುತ್ತಿದೆ ಎಂದು ತಿಳಿಸಿದರು.  ಉದ್ಯೋಗಾವಕಾಶದ ಕೊರತೆಯಿಂದಾಗಿ ಎಂಟೆಕ್  ಬೇಡಿಕೆ ಕ್ಷೀಣಿಸಿದೆ ಎಂದು ಪಿಜಿ ಕೋರ್ಸ್ ಬೋಧನಾ ವಿಭಾಗದ ಸಿಬ್ಬಂದಿ ಹೇಳುತ್ತಾರೆ.

ಎಂಟಿಕ್ ಪದವೀಧರರಿಗೆ ಬೋಧನೆಯೇ ಪ್ರಮುಖ ಉದ್ಯೋಗವಾಗಿದೆ. ಆದರೆ. ಈಗ ಹುದ್ದೆಗಳು ಖಾಲಿ ಇಲ್ಲದಿರುವುದರಿಂದ ಬೋಧನಾ ವೃತ್ತಿ ಆಯ್ಕೆ ಮಾಡಿಕೊಳ್ಳುವವರು ಉದ್ಯೋಗಕ್ಕಾಗಿ ಸಂಕಷ್ಟ ಎದುರಿಸುವಂತಾಗಿದೆ ಎಂದು ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜ್ ಫ್ರಿನ್ಸಿಪಾಲರೊಬ್ಬರು ಹೇಳಿದ್ದಾರೆ.

ಮೆಷಿನ್ ಡಿಸೈನ್ ಎಂಜಿನಿಯರಿಂಗ್, ವಿಎಲ್ ಎಸ್ ಐ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಕೆಲ ಸ್ನಾತಕೋತ್ತರ ಪದವಿಗಳಿಗೆ ಕಳೆದ ಮೂರು ವರ್ಷಗಳಿಂದ ಕಡಿಮೆ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಕೆಲ ಕೋರ್ಸ್ ಗಳಿಗೆ ಯಾರೂ ಕೂಡಾ ಸೇರುತ್ತಿಲ್ಲ. ಇದನ್ನು ಪರಿಗಣಿಸಿ  ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಟಿಯು ವಿಸ್ತರಣಾ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ ಎಂದು ಜಗನ್ನಾಥ್ ರೆಡ್ಡಿ  ತಿಳಿಸಿದ್ದಾರೆ.

ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಗಳಿಗೆ  ಬೇಡಿಕೆ ಹೆಚ್ಚಳ

ಕಳೆದ ಮೂರು ವರ್ಷಗಳಿಂದ ಎಂಟೆಕ್ ಗೆ ಬೇಡಿಕೆ ಇಲ್ಲದಿದ್ದರೂ ಸಿವಿಲ್ ಇಂಜಿನಿಯರಿಂಗ್ ಈಗಲೂ ಬೇಡಿಕೆ ಉಳಿಸಿಕೊಂಡಿದೆ.  ಸಿವಿಲ್ ಇಂಜಿನಿಯರಿಂಗ್ ಹಾಗೂ ಉಪ ಕೋರ್ಸ್ ಗಳಾದ ಕನ್ ಸ್ಟ್ರಕ್ಷನ್ ಎಂಜಿನಿಯರಿಂಗ್,  ಹೈವೆ ಟೆಕ್ನಾಲಜಿಗೆ ಬೇಡಿಕೆ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com